ವೀರಾಜಪೇಟೆ, ಆ. 2: ವೀರಾಜಪೇಟೆ ಕಾವೇರಿ ಪದವಿ ಕಾಲೇಜಿನ ವಿದ್ಯಾರ್ಥಿ ಉಪಾಧ್ಯಕ್ಷರಾಗಿ ಎಸ್.ಕೆ. ರಂಜಿತ್, ಪ್ರಧಾನ ಕಾರ್ಯದರ್ಶಿಯಾಗಿ ಶೀನೊಜ್ ಕೆ.ಎಸ್, ಸಾಂಸ್ಕøತಿಕ ಕಾರ್ಯದರ್ಶಿಯಾಗಿ ವಿನಯ್ ಪಿ.ಕೆ., ಕ್ರೀಡಾ ಕಾರ್ಯದರ್ಶಿಯಾಗಿ ಪೊನ್ನಣ್ಣ ಎ.ಎಂ. ಹಾಗೂ ಇಂದ್ರಜ ಟಿ.ಆರ್. ಆಯ್ಕೆಯಾಗಿದ್ದಾರೆ. ಚುನಾವಣಾ ಸಂದರ್ಭ ಪ್ರಾಂಶುಪಾಲ ಪ್ರೊ. ಸಿ.ಎಂ. ನಾಚಪ್ಪ, ಪ್ರೊ. ಶಂಕರ್ ನಾರಾಯಣ್ ಉಪಸ್ಥಿತರಿದ್ದರು.