ಚೆಟ್ಟಳ್ಳಿ, ಆ. 2: ಕಂಡಕರೆಯ ಹಯಾತುಲ್ ಇಸ್ಲಾಂ ಮದರಸದಲ್ಲಿ ನೂತನವಾಗಿ ನಿರ್ಮಿಸಿರುವ ಕಂಪ್ಯೂಟರ್ ಸೆಂಟರ್ ಉದ್ಘಾಟನೆಯನ್ನು ಹಮೀದ್ ಜಮಲುಲೈಲಿ ತಂಙಳ್ ನೆರವೇರಿಸಿದರು.

ಎಸ್.ವೈ.ಎಸ್. ಕಂಡಕರೆ ಯೂನಿಟ್ ವತಿಯಿಂದ ಪ್ರತೀ ತಿಂಗಳು ನಡೆದುಕೊಂಡು ಬರುತ್ತಿರುವ ಮಹ್ಳರತುಲ್ ಬದ್ರಿಯಾ ಕಾರ್ಯಕ್ರಮದ ನೇತೃತ್ವವನ್ನು ತಂಙಳ್ ವಹಿಸಿದ್ದರು. ಸಂಘಟನೆಯ ವತಿಯಿಂದ ಮಸೀದಿಗೆ ಹೊಸದಾಗಿ ಕ್ಲೀನರ್ ನೀಡಲಾಯಿತು. ಈ ಸಂದರ್ಭ ಮಾತನಾಡಿದ ಹಮೀದ್ ತಂಙಳ್ ಈ ಆಧುನಿಕ ಜಗತ್ತು ಬಹಳ ವೇಗವಾಗಿ ಮುಂದುವರೆಯುತ್ತಿದೆ. ಈ ಯುಗ ಕಂಪ್ಯೂಟರ್ ಯುಗವೆಂದೇ ಪ್ರಖ್ಯಾತಿ ಹೊಂದಿದೆ. ವಿದ್ಯಾರ್ಥಿಗಳು ಕಂಪ್ಯೂಟರ್‍ನಲ್ಲಿ ಉತ್ತಮ ವಿಷಯ ಕಲಿತು ಸಫಲರಾಗಿ ತಮ್ಮ ಮುಂದಿನ ಜೀವನವನ್ನು ಕಟ್ಟಿಕೊಳ್ಳಬೇಕಾಗಿ ಹೇಳಿದರು. ಈ ಸಂದರ್ಭ ಅಧ್ಯಕ್ಷ ಹನೀಫ ಇಮಮಿ, ಮಹಲ್ ಅಧ್ಯಕ್ಷ ಆಲಿ, ಕಾರ್ಯದರ್ಶಿ ಗಫೂರ್, ಗ್ರಾಮ ಪಂಚಾಯಿತಿ ಸದಸ್ಯ ಮೊಹಮ್ಮದ್ ರಫಿ, ರಜಾಕ್, ಸುಹೈಲ್ ಮತ್ತಿತರರು ಉಪಸ್ಥಿತರಿದ್ದರು. - ಕೆ.ಎಂ. ಇಸ್ಮಾಯಿಲ್ ಕಂಡಕರೆ