ಮಡಿಕೇರಿ, ಆ. 2: ನಗರದ ವಿಕಾಸ ಜನಸೇವಾ ಟ್ರಸ್ಟ್ ಹಾಗೂ ಪ್ರಜಾಸತ್ಯ ಪತ್ರಿಕೆಯ ಸಂಯುಕ್ತ ಆಶ್ರಯದಲ್ಲಿ ವಿಕಾಸ ಅಭಿಯಾನದಡಿ ಕೊಡಗು ಜಿಲ್ಲೆಯನ್ನು ಅನಾಥ ಮತ್ತು ಮಾನಸಿಕ ಅಸ್ವಸ್ಥರ ಮುಕ್ತ ಜಿಲ್ಲೆಯನ್ನಾಗಿಸುವ ಕಾರ್ಯಕ್ರಮ ನಡೆಯುತ್ತಿದೆ.

ಈ ಅಭಿಯಾನದಲ್ಲಿ ಇತ್ತೀಚೆಗೆ ಮೂರು ಮಂದಿ ಅಸ್ವಸ್ಥರನ್ನು ರಕ್ಷಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಟ್ರಸ್ಟ್‍ನ ಅಧ್ಯಕ್ಷ ಹೆಚ್.ಕೆ. ರಮೇಶ್ ಅವರು ತಿಳಿಸಿದ್ದಾರೆ. ಪಾಲಿಬೆಟ್ಟದ ಕೋಟೆ ಬೆಟ್ಟ ನಿವಾಸಿ ನಂಜಮ್ಮ, ಮಡಿಕೇರಿ ನಗರದ ಲಕ್ಷ್ಮಮ್ಮ ಹಾಗೂ ನಿಂಗಮ್ಮ ಅವರನ್ನು ಸಂಸ್ಥೆ ವತಿಯಿಂದ ಜಿಲ್ಲಾ ಆಸ್ಪತ್ರೆಗೆ ಸೇರಿಸಿ ನಂತರ ಬೆಂಗಳೂರಿನ ಆರ್.ವಿ.ಎಂ. ಆಸ್ಪತ್ರೆಗೆ ಪ್ರಥಮ ಚಿಕಿತ್ಸೆ ಹಾಗೂ ಆಶ್ರಮದ ಪುನರ್ವಸತಿಗಾಗಿ ಕಳುಹಿಸಿ ಕೊಡಲಾಗಿದೆ. ಪೊಲೀಸ್ ಇಲಾಖೆ ಹಾಗೂ ಆರೋಗ್ಯ ಇಲಾಖೆಯ ಸಹಕಾರ ದೊಂದಿಗೆ ಈ ಕಾರ್ಯವನ್ನು ನಿರ್ವಹಿಸಲಾಗಿದೆ ಎಂದು ಅವರು ಹೇಳಿದ್ದಾರೆ.