ಮಡಿಕೇರಿ, ಆ. 2: ಇಸ್ಕಾನ್ ಜಗನ್ನಾಥ ಮಂದಿರದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಶಾಲಾ ಮಕ್ಕಳಿಗೆ ತಾ. 22 ರಂದು ಮಡಿಕೇರಿಯ ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯಲ್ಲಿ ವಿವಿಧ ಸ್ಪರ್ಧಾ ಕಾರ್ಯಕ್ರಮ ನಡೆಯಲಿದೆ. ಎಲ್.ಕೆ.ಜಿ., ಯು.ಕೆ.ಜಿ. ಮಕ್ಕಳಿಗೆ ಛದ್ಮವೇಷ, 1 ರಿಂದ 10ನೇ ತರಗತಿ ಮಕ್ಕಳಿಗೆ ಶ್ಲೋಕ ಪಟನ, ಕಥೆ ಹೇಳುವದು, ಭಕ್ತಿಗೀತೆ, ಬಣ್ಣ ಹಚ್ಚುವದು, ಆಸಕ್ತಿ ಇದ್ದವರು ಅರುಣ ಸ್ಟೋರ್ ಮಹಡಿ ಮೇಲೆ ಇರುವ ಇಸ್ಕಾನ್ ಮಂದಿರಕ್ಕೆ ಬಂದು ಅರ್ಜಿ ಫಾರಂ ಪಡೆದುಕೊಳ್ಳಬಹುದು. ಅರ್ಜಿ ಫಾರಂ ಅನ್ನು ಇಸ್ಕಾನ್ ಮಂದಿರದಲ್ಲಿ ಕೊಡಲಾಗುವದು. ತಾ. 14 ಕಡೆಯ ದಿನ ಆಗಿದ್ದು, ಮಾಹಿತಿಗೆ ಮೊ. 9449253712 ಸಂಪರ್ಕಿಸಬಹುದು.