ಸೋಮವಾರಪೇಟೆ, ಆ. 2: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಮಹಾ ಮಂಡಳದಿಂದ ಆ. 16 ರಂದು ಜಿಲ್ಲಾಕೇಂದ್ರ ಮಡಿಕೇರಿಯಲ್ಲಿ ಮುಷ್ಕರ ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕು ಅಧ್ಯಕ್ಷೆ ಕೆ.ಕೆ. ಶಾರದ ತಿಳಿಸಿದ್ದಾರೆ.

ಅಂಗನವಾಡಿ ಕಾರ್ಯಕರ್ತೆಯರಿಗೆ 18ಸಾವಿರ ವೇತನ ಜಾರಿಗೊಳಿಸಬೇಕು. ಹೆಚ್ಚಿನ ಸೇವೆ ಸಲ್ಲಿಸಿರುವವರನ್ನು ಮಹಿಳಾ ಮೇಲ್ವಿಚಾರಕಿ ಹುದ್ದೆಗೆ ನೇಮಕಗೊಳಿಸಬೇಕು. ದಿನಭತ್ಯೆಯನ್ನು 150ಕ್ಕೆ ಹೆಚ್ಚಿಸಬೇಕು. ತುಟ್ಟಿ ಭತ್ಯೆ ಜಾರಿಗೆ ತರಬೇಕು.ಮಾತೃಪೂರ್ಣ ಯೋಜನೆಯ ಬಗ್ಗೆ ಸಮಗ್ರ ಅಧ್ಯಯನ ನಡೆಸಿ ಈ ಹಿಂದೆ ಇದ್ದಂತಹ ಗರ್ಭಿಣಿ ಬಾಣಂತಿಯರಿಗೆ ಪೌಷ್ಟಿಕ ಆಹಾರ ವಿತರಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಯಲಿದೆ ಎಂದರು.

ಬಾಲವಿಕಾಸ ಸಮಿತಿ ಅಧ್ಯಕ್ಷರ ಜಂಟಿ ಖಾತೆ ತೆರೆಯುವ ಆದೇಶವನ್ನು ವಾಪಸ್ ಪಡೆಯಬೇಕು. ಮಿನಿ ಅಂಗನವಾಡಿಗಳನ್ನು ಅಂಗನವಾಡಿಗಳನ್ನಾಗಿ ಪರಿವರ್ತಿಸಿ ಸಹಾಯಕಿಯನ್ನು ನೇಮಕಗೊಳಿಸಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮುಷ್ಕರ ನಡೆಯಲಿದೆ ಎಂದು ತಿಳಿಸಿದ್ದಾರೆ.