ಮಡಿಕೇರಿ, ಜು. 28: ಕುಗ್ರಾಮಗಳಲ್ಲಿರುವ ಸರ್ಕಾರಿ ಶಾಲೆಯ ಮಕ್ಕಳನ್ನು ಪ್ರೋತ್ಸಾಹಿಸುವ ಹಾಗೂ ಹಾಜರಾತಿ ಅಧಿಕಗೊಳಿಸುವ ಸಲುವಾಗಿ ಗೋಣಿಕೊಪ್ಪಲಿನ ಇಂಡಿಯನ್ ಸೀನಿಯರ್ ಚೇಂಬರ್ ವತಿಯಿಂದ ನಡಿಕೇರಿ ಶಾಲೆಯ ಮಕ್ಕಳಿಗೆ ಉಚಿತವಾಗಿ ದಾನಿಗಳಾದ ಸಣ್ಣುವಂಡ ರಜನ್ ತಿಮ್ಮಯ್ಯ, ಕೆ.ಬಿ. ಸಂಜೀವ್, ಪೂನ್ನೋಲತಂಡ ಕಿರಣ್ ಹಾಗೂ ಮಂಡೇಪಂಡ ಸಚಿನ್ ನೀಡಿದ ನೋಟ್ ಪುಸ್ತಕಗಳು, ಲೇಖನಿ ಸಾಮಗ್ರಿಗಳು, ಛತ್ರಿಗಳನ್ನು ಹಾಗೂ ಶಾಲೆಗೆ ಬುಕ್ ಶೆಲ್ಪ್, ವಾಟರ್ ಫಿಲ್ಟರ್‍ಗಳನ್ನು ನೀಡಲಾಯಿತು.

ಈ ಸಂದರ್ಭ ಸೀನಿಯರ್ ಚೇಂಬರ್ ಅಧ್ಯಕ್ಷ ಮನ್ನಕಮನೆ ಬಾಲಕೃಷ್ಣ, ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ಕೋಳೇರ ನರೇಂದ್ರ, ಹಳೆಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಚೀರಂಡ ಕಂದ ಸುಬ್ಬಯ್ಯ ಮಾತನಾಡಿದರು.

ಚೇಂಬರ್‍ನ ಮೂಕಳೇರ ದಿಲ್, ಮುಕ್ಕಾಟಿರ ಸಂದೀಪ್, ಕೊಡಂದೇರ ಪ್ರವೀಣ್, ಟಿ. ಅಂಟೊಣಿ, ಕಳ್ಳಿಚಂಡ ಮಂಜು, ಕಳ್ಳಿಚಂಡ ಶಂಬು ಪೂವಯ್ಯ, ಮುದ್ದಿಯಡ ನಿತಿನ್, ಕಿರುದಂಡ ಉಮೇಶ್, ಮಾಣಿಯಪ್ಪಂಡ ಶಾರದ, ಗ್ರಾ.ಪಂ. ಸದಸ್ಯ ಕೋಳೇರ ಬೋಪಣ್ಣ ಹಾಗೂ ಪೋಷಕರು ಹಾಜರಿದ್ದರು.

ಶಿಕ್ಷಕಿ ಕೋಪುಡ ಸೌಮ್ಯ ಚಿಣ್ಣಪ್ಪ ಸ್ವಾಗತಿಸಿ, ನಿರೂಪಿಸಿ, ಮುಖ್ಯ ಶಿಕ್ಷಕಿ ಚಿಮ್ಮಣಮಾಡ ಶಾಂತಿ ವಂದಿಸಿದರು.