ಗೋಣಿಕೊಪ್ಪ ವರದಿ, ಜು. 28: ಪೊನ್ನಂಪೇಟೆ ಸಾಯಿಶಂಕರ್ ವಿದ್ಯಾ ಸಂಸ್ಥೆಯಲ್ಲಿ ಗೋಣಿಕೊಪ್ಪ ರೋಟರಿ ವತಿಯಿಂದ ರೋಟರಾಕ್ಟ್ ಕ್ಲಬ್ನ್ನು ಅಸ್ತಿತ್ವಕ್ಕೆ ತರಲಾಯಿತು.
ಪದಾಧಿಕಾರಿಗಳಿಗೆ ಪದಗ್ರಹಣ ಬೋಧಿಸಲಾಯಿತು. ರೋಟರಾಕ್ಟ್ ಅಧ್ಯಕ್ಷೆಯಾಗಿ ಬಿ.ಎಂ. ಶಿಲ್ಪಿಕಾ, ಕಾರ್ಯದರ್ಶಿಯಾಗಿ ಜುಮಾನಬಾನು ಪದಗ್ರಹಣ ಸ್ವೀಕರಿಸಿದರು.
ರೋಟರಿ ಅಧ್ಯಕ್ಷ ಪಾರುವಂಗಡ ದಿಲನ್ ಚೆಂಗಪ್ಪ ಮಾತನಾಡಿ, ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಮೈಗೂಡಿಸಿಕೊಳ್ಳಲು ಕ್ಲಬ್ ಸಹಕಾರಿ ಎಂದರು. ಇಂಟರಾಕ್ಟ್ ಕ್ಲಬ್ನ ವಲಯ ಸಂಯೋಜಕಿ ಇಮ್ಮಿ ಉತ್ತಪ್ಪ, ರೋಟರಿ ಹಿರಿಯ ಸದಸ್ಯ ಡಾ. ಚಂದ್ರಶೇಖರ್, ಸಾಯಿಶಂಕರ್ ಕಾಲೇಜು ಪ್ರಾಂಶುಪಾಲ ಡಿ.ವಿ. ದಶಮಿ, ಶಾಲಾ ಮುಖ್ಯೋಪಾಧ್ಯಾಯಿನಿ ಲತಾ, ಸಂಚಾಲಕಿ ಕಾವೇರಮ್ಮ ಉಪಸ್ಥಿತರಿದ್ದರು.