ಕೂಡಿಗೆ, ಜು. 28: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹೆಬ್ಬಾಲೆ ವಲಯ ಅಂಬೇಡ್ಕರ್ ಬ್ಲಾಕ್‍ನಲ್ಲಿ ಪೃಥ್ವಿ ಪ್ರಗತಿಬಂಧು ಸಂಘ ಉದ್ಘಾಟನೆ ಮಾಡಲಾಯಿತು.

ಹೆಬ್ಬಾಲೆ ಗ್ರಾಮ ಪಂಚಾಯಿತಿ ಸದಸ್ಯೆ ದೇವಮ್ಮ ಸಂಘವನ್ನು ಉದ್ಘಾಟಿಸಿ ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ವಿವಿಧ ಸಂಘಗಳನ್ನು ರಚಿಸಿ ಪ್ರಗತಿನಿಧಿ ಸಾಲ ಅನುದಾನ ನೀಡುವ ಮೂಲಕ ಜನರಿಗೆ ಉತ್ತಮ ಕಾರ್ಯಗಳನ್ನು ಮಾಡುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಸೇವಾಪ್ರತಿನಿಧಿ ಪ್ರಮಿಳಾ ಹಾಗೂ ಸಂಘದ ಸದಸ್ಯರು ಇದ್ದರು.