ಮಡಿಕೇರಿ, ಜು. 28: ಅಮ್ಮತ್ತಿ ಹೋಬಳಿ ಬೆಟ್ಟಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೊಳಪಟ್ಟ ಅನಘ ಕಾಫಿ ತೋಟ ವಲಯ ಕನ್ನಡ ಮಠದಲ್ಲಿ ತಾ. 29 ರಂದು (ಇಂದು) ಅಪರಾಹ್ನ 3 ರಿಂದ ‘ಮರೆಯಾಗುತ್ತಿರುವ ಕನ್ನಡ ಪದಗಳು’ ಎಂಬ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಚನ್ನಬಸವದೇಶಿಕೇಂದ್ರ ಸ್ವಾಮಿಗಳ ಸಮ್ಮುಖದಲ್ಲಿ ಮರೆಯಾಗುತ್ತಿರುವ ಕನ್ನಡ ಪದಗಳ ಬಗ್ಗೆ ಡಾ. ಎಂ. ಶಿವಕುಮಾರ ಅವರು ಉಪನ್ಯಾಸ ನೀಡಲಿದ್ದಾರೆ.