ವೀರಾಜಪೇಟೆ, ಜು. 13: ಇಂದು ನಡೆಯಬೇಕಾಗಿದ್ದ ಅಮ್ಮತ್ತಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಪದವಿ ಚುನಾವಣೆಯನ್ನು ಕೋರಂ ಇಲ್ಲದ ಕಾರಣ ಮುಂದೂಡಲಾಗಿದೆ ಎಂದು ಸಹಾಯಕ ಚುನಾವಣಾಧಿಕಾರಿ ಗೋವಿಂದರಾಜು ತಿಳಿಸಿದ್ದಾರೆ. ಗ್ರಾಮ ಪಂಚಾಯಿತಿಯ ಹತ್ತು ಮಂದಿ ಚುನಾಯಿತ ಸದಸ್ಯರುಗಳ ಪೈಕಿ ಮೂರು ಮಂದಿ ಮಾತ್ರ ಹಾಜರಿದ್ದುದರಿಂದ ಚುನಾವಣೆ ನಡೆಸಲು ಸಾಧ್ಯವಾಗಿಲ್ಲ. ಚುನಾವಣೆ ನಡೆಸಲು ಕನಿಷ್ಟ ಆರು ಮಂದಿ ಸದಸ್ಯರುಗಳಿರಬೇಕು.