ಮಡಿಕೇರಿ, ಜು. 11: ಭಾರತೀಯ ಸಂಬಾರ ಮಂಡಳಿಯು ಪ್ರತಿ ವರ್ಷದಂತೆ ಈ ವರ್ಷವೂ ಉತ್ತಮ ಗುಣಮಟ್ಟದ ಹಾಗೂ ಅಧಿಕ ಇಳುವರಿ ಕೊಡುವ ಸಂಬಾರ ಬೆಳೆಗಳ ಸಸಿಗಳನ್ನು ಮಂಡಳಿಯು ಬಿಳಿಗೇರಿ, ಮಡಿಕೇರಿ ತಾಲೂಕು, ಐಗೂರು, ಸೋಮವಾರಪೇಟೆ ತಾಲೂಕು, ಕ್ಷೇತ್ರಾಧಿಕಾರಿಗಳು ಸಂಬಾರ ಮಂಡಳಿ ಮಡಿಕೇರಿ, ಸೋಮವಾರಪೇಟೆ, ವೀರಾಜಪೇಟೆ, ಭಾಗಮಂಡಲ ಹಾಗೂ ಸಹಾಯಕ ನಿರ್ದೇಶಕರು, ಸಂಬಾರ ಮಂಡಳಿ, ಮಡಿಕೇರಿ ಈ ಸಸ್ಯಪಾಲನ ಕೇಂದ್ರಗಳಿಂದ ಬೆಳೆಗಾರರಿಗೆ, ಸಂಸ್ಥೆ, ಸರ್ಕಾರಿ ಇಲಾಖೆಗಳಿಗೆ ಮಾರಾಟ ಮಾಡಲಿದೆ. ಆಸಕ್ತ ಬೆಳೆಗಾರರು ನಿಗದಿತ ಅರ್ಜಿ ಮತ್ತು ಹೆಚ್ಚಿನ ವಿವರಗಳಿಗೆ ಸಮೀಪದ ಭಾರತೀಯ ಸಂಬಾರ ಮಂಡಳಿಯ ಕಚೇರಿಯನ್ನು ಸಂಪರ್ಕಿಸಬಹುದು.