ಸುಂಟಿಕೊಪ್ಪ, ಜು. 11: ಪಟ್ಟಣದ ಮುಖ್ಯ ರಸ್ತೆಯಲ್ಲಿರುವ ಎಂ.ಎಸ್.ಲೀಲಾ ಎಂಬವರ ಮನೆಯ ಶೌಚಾಲಯದಲ್ಲಿ ಬುಧವಾರ ಬೆಳಿಗ್ಗೆ ನುಗ್ಗಿದ್ದ ಅಪರೂಪದ ಹಾವನ್ನು ಉರಗ ತಜ್ಞ ವಿನೋದ್ ಸೆರೆ ಹಿಡಿದು ಕಾಡಿಗೆ ಬಿಟ್ಟಿದ್ದಾರೆ.

ಸುಮಾರು 4 ಅಡಿ ಉದ್ದದ ವಿಷಪೂರಿತ ಹಾವು ಕಂಡುಬಂದಿದ್ದು, ಕೂಡಲೇ ವಿನೋದ್ ಅವರಿಗೆ ದೂರವಾಣಿ ಮೂಲಕ ಸಂಪರ್ಕಿಸಿದಾಗ ಸ್ಥಳಕ್ಕೆ ಆಗಮಿಸಿ ಹಾವನ್ನು ಸೆರೆ ಹಿಡಿದಿದ್ದಾರೆ. ಅದು ಬೆಕ್ಕಿನ ಕಣ್ಣನ್ನು ಹೋಲುವಂತಹ ವಿಷಪೂರಿತ ಹಾವಾಗಿದ್ದು, ಜನರು ತೊಂದರೆ ನೀಡಿದಲ್ಲಿ ಮಾತ್ರ ವಿರೋಧಿಸುತ್ತದೆ. ಯಾವದೇ ಹಾವನ್ನು ಕಂಡೊಡನೇ ಅದನ್ನು ಸಾಯಿಸದೇ ತನ್ನ ದೂರವಾಣಿ ಸಂಖ್ಯೆ 7022707624ಗೆ ತಿಳಿಸುವಂತೆ ಮನವಿಮಾಡಿಕೊಂಡಿದ್ದಾರೆ.