ಮಗುವನ್ನು ಒಂಬತ್ತು ತಿಂಗಳು ಹೊಟ್ಟೆಯಲ್ಲಿ ಹೊತ್ತು ತಾಯ್ತತನವನ್ನು ಅನುಭವಿಸಬೇಕಿದ್ದ ತೇಜಾವತಿ (ಲಾಸ್ಯ) ಪ್ರಸವ ವೇದನೆಯಲ್ಲೇ ಇಹಲೋಕ ತ್ಯಜಿಸಿದ ಕುಟುಂಬದ ನೋವಿನ ಕಣ್ಣೀರ ವೇದನೆಯ ಕೂಗು. ಈ ಸಾವು ನ್ಯಾಯವೇ..?

ಅಂದು ಜುಲೈ 1. ಒಂಬತ್ತು ತಿಂಗಳು ತುಂಬಿ ಪ್ರಸವ ವೇದನೆಯಲ್ಲಿ ವೀರಾಜಪೇಟೆ ಪ್ರತಿಷ್ಠಿತ ನರ್ನಿಂಗ್ ಹೋಂಗೆ ಲಾಸ್ಯ ದಾಖಲಾಗುತ್ತಾಳೆ. ತಾ. 2 ರಂದು ಬೆಳಿಗ್ಗೆ 9.27ಕ್ಕೆ ಹೆಣ್ಣು ಮಗುವಿಗೆ ಜನ್ಮ ನೀಡಿ ಹೊರಗೆ ಕಾದು ಕೂತಿದ್ದ ಸಂಬಂಧಿಕರು ಮಗುವನ್ನು ನೋಡಿ ಅತೀವ ಸಂತಸಪಟ್ಟರೆ... ಹೆತ್ತಮ್ಮನನ್ನು ಕಾಣುವ ಹಂಬಲ ಮತ್ತೊಂದೆಡೆ. ಸುಮಾರು ಅರ್ಧ ಗಂಟೆಯಾದರೂ ಬರದ ಹೆತ್ತವಳಿಗಾಗಿ ಒಳಗೆ ಹೋಗಿ ನೋಡೋಣವೆಂದರೆ ಬಾಗಿಲಲ್ಲಿ ದಾದಿಯೊಬ್ಬಳು ಶುಚಿಯಾಗ್ತಾ ಇದೆ ತಡೆಯಿರಿ ಎನ್ನುತ್ತಾರೆ.

ಒಬ್ಬ ಹೆತ್ತವಳಿಗೆ ಮಾತ್ರ ತಿಳಿಯುವದು ಹೆರಿಗೆಯ ನೋವು ಎಂಬಂತೆ ಸಂಬಂಧಿಕರು ಕಾದು ಸಾಕಾಗಿ ಬಲಾತ್ಕಾರವಾಗಿ ಪ್ರಸವ ಕೋಣೆಯೊಳಗೆ ನುಗ್ಗಿದಾಗ ಬೆಚ್ಚಿಬಿದ್ದರು. ಪ್ರಸವದ ನಂತರ ನಿಲ್ಲದ ರಕ್ತಸ್ರಾವ ಒಂದೆಡೆಯಾದರೆ ಆಕೆ ಆಯಾಸದಿಂದ ಬಳಲುತ್ತಿರುವ ಸಂಕಟ ಮತ್ತೊಂದೆಡೆ.

ಸಂಬಂಧಿಕರು ಒಡನೆ ಬ್ರೆಡ್ ತಿನ್ನಿಸಿ ಕಾಫಿಯನ್ನು ನಿಧಾನವಾಗಿ ಕುಡಿಸಿ ತಲೆಸವರಿ ಧೈರ್ಯತುಂಬಿ ದರು. ವೈದ್ಯರ ಕೊಠಡಿಗೆ ಧಾವಿಸಿ ರಕ್ರಸ್ರಾವ ಹಾಗೂ ದಾದಿಯರ ಶುಚಿಗೊಳಿಸುವ ಪರಿಯ ಬಗ್ಗೆ ನೋವನ್ನು ವೈದ್ಯರಲ್ಲಿ ತೋಡಿಕೊಂಡಾಗ ಅದು ಸಿವಿಯರ್ ಅಲ್ಲ... ಸಿಂಪಲ್. ಒಂದು ಘಳಿಗೆಗೆ ಸರಿಹೋಗುತ್ತೆ... ನೀವು ಮಗುವನ್ನು ಪಕ್ಕದ ಆಸ್ಪತ್ರೆಯ ಮಕ್ಕಳ ತಜ್ಞರಿಗೆ ತೋರಿಸಿ ಬನ್ನಿ ಎಂಬ ಸಲಹೆ ಬಂದಿತು. ಮಗುವನ್ನು ಆ ಸಮಯ ದಲ್ಲಿ ಹೇಗೆ ಕರೆದೊಯ್ಯುವದು? ಆಗ ಮಧ್ಯಾಹ್ನ 12.30 ಸಮಯ. ಇತ್ತ ಹೆರಿಗೆಯಾದವಳನ್ನು ಮೂತ್ರ ವಿಸರ್ಜನೆಗೆ ವ್ಯವಸ್ಥೆ ಮಾಡಬೇಕಿತ್ತು. ಅದನ್ನು ಪ್ರಶ್ನಿಸಿದಾಗ ಕೂಡದು ಎಂದು ಆಕೆಯನ್ನು ಅಂಗಾತವಾಗಿ ಬರೀ ಮೈಯಲ್ಲೇ ಪ್ರಸವ ಕೋಣೆಯಲ್ಲಿ ಮಲಗಿಸಿ ರಕ್ತಸ್ರಾವವನ್ನು ತಡೆಯುತ್ತಿದ್ದೇವೆಂಬ ಸಮಜಾಯಿಷಿಕೆ ಬಂತು.

ಸಂಬಂಧಿಕರ ಒತ್ತಾಯಕ್ಕೆ ಮಣಿದ ವೈದ್ಯೆ ಈ ಕೂಡಲೆ ಎರಡು ಬಾಟಲಿ ರಕ್ತ ತನ್ನಿ ಎಂದರು. ನಾಲ್ಕು ಸ್ನೇಹಿತರು ರಕ್ತ ನೀಡಲು ಮುಂದಾಗುತ್ತಾರೆ. ನೇರವಾಗಿ ರಕ್ತ ನೀಡಲು ಸಾಧ್ಯವಿಲ್ಲ. ಮಡಿಕೇರಿಯಿಂದಲೇ ತರಬೇಕು ಎಂದು ಹೇಳಿದಕ್ಕೆ ಸಂಬಂಧಿಕರು ಹಾಗೂ ವೈದ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಮಡಿಕೇರಿಗೆ ಹೋಗಲು ಒಂದು ಗಂಟೆ ಬರಲು ಒಂದುಗಂಟೆ. ಅದರ ಬದಲು ತಾಯಿ-ಮಗುವನ್ನು ಮಡಿಕೇರಿಗೆ ಕರೆದೊಯ್ದು ಎರಡಲ್ಲ ಹತ್ತು ಬಾಟಲಿ ರಕ್ತ ಕೊಡಿಸುತೇವೆಂದರು. ಆದರೂ ವೈದೆÉ್ಯ ಇದು ಅಷ್ಟು ‘ಸಿವಿಯರಲ್ಲ’ ಏನೋ.. ರಕ್ತಸ್ರಾವವಾಗುತ್ತಿದೆ. ಬೇಕಿದ್ದರೆ ನೀವು ಮಡಿಕೇರಿ ಜಿಲ್ಲಾಸ್ಪತ್ರೆಗೆ ಹೋಗಿ ಎಂದರು.

ನೋವಿನಿಂದ ಬಳಲಿ ಹೋಗಿದ್ದ ಜನ್ಮದಾತೆಯನ್ನು ಹಾಗೂ ಹಸುಗೂಸನ್ನು ಸಂಬಂಧಿಕರು ತುರ್ತುಚಿಕಿತ್ಸಾ ವಾಹನದಲ್ಲಿ ಮಡಿಕೇರಿ ಜಿಲ್ಲಾಸ್ಪತ್ರೆಗೆ ಹೊರಡುವಾಗ ಮಧ್ಯಾಹ್ನ 1.30. ಬೆಳಿಗ್ಗೆ 9.17ಕ್ಕೆ ಹೆರಿಗೆಯಾಗಿ ಆ ನತದೃಷ್ಟೆ ಹೆರಿಗೆ ವಾರ್ಡಿನಲ್ಲಿ ನೋವಿನ ನಡುವಲ್ಲಿ ಒದ್ದಾಡಿದ್ದು ಬರೋಬರಿ 5 ಗಂಟೆ. ಆ ಆಸ್ಪತ್ರೆಯಲ್ಲಿ ರಕ್ತ ತಡೆಗಟ್ಟುವ ಕ್ರಮವನ್ನು ಕಣ್ಣಾರೆ ಕಂಡ ಸಂಬಂಧಿಕರು ಹೇಳುವದು ಮನಕಲಕುವಂತದು. ಬ್ಯಾಂಡೆಜ್ ಬಟ್ಟೆಯನ್ನು ತುರುಕುವದು, ತೆಗೆಯುವದಲ್ಲದೆ ಮತ್ಯಾವ ಸೌಲಭ್ಯವಿಲ್ಲ.

ಇತ್ತ ಮಡಿಕೇರಿ ಜಿಲ್ಲಾಸ್ಪತ್ರೆಗೆ ಸೇರುವಾಗ ಅಪರಾಹ್ನ 2.30. ಇಲ್ಲಿ ವೈದ್ಯರನ್ನು ಸಂಪರ್ಕಿಸಿದಾಗ ಇಷ್ಟು ಹೊತ್ತು ಏನು ಮಾಡಿದಿರಿ? ಬಹಳ ಸಂಕಷ್ಟದÀ ಸ್ಥಿತಿಯಾಗಿದೆ ಎಷ್ಟು ರಕ್ತ ನೀಡಿದರೂ ಮೊದಲ ಅಜಾಗರುಕಥೆಯೇ ಇದಕ್ಕೆ ಕಾರಣವೆಂಬ ಮಾತು ಕೇಳಬರತೊಡಗಿತು.

ಇತ್ತ ಕಂದಮ್ಮ ತಾಯಿ ಮಡಿಲಲ್ಲಿ ತನ್ನಮ್ಮನ ಎದೆ ಹಾಲನ್ನು ಕಾತರದಿಂದ ಕಾಯುತ್ತಿದ್ದರೆ, ಅತ್ತ ಅಮ್ಮನ ಅಪ್ಪುಗೆಯೂ ಇಲ್ಲ; ಹಾಲು ಇಲ್ಲ. ಪುಣ್ಯಕೋಟಿಯ ಕಥೆಯಲ್ಲಿ ಹಸು ತನ್ನ ಕಂದಮ್ಮನಿಗೆ ಹಾಲುಣಿಸಲು ಕಾತರಿಸುತ್ತಿದ್ದಾಗ ದುಷ್ಟಮನಸ್ಸಿನ ವ್ಯಾಘ್ರನೇ ಸತ್ಯಧರ್ಮಕ್ಕೆ ಮೆಚ್ಚಿ ತಿನ್ನದೆ ತನ್ನ ಪ್ರಾಣವನ್ನೇ ಕಳೆದು ಕೊಂಡಿತು. ಅದಕ್ಕಿಂತಲೂ ಕಠೋರ ಈ ಕಥೆ. ಲಾಸ್ಯ ತಾ. 3ರ ಮುಂಜಾನೆಯ ಸೂರ್ಯ ಉದಯಿಸುವ ಹೊತ್ತಿ ನೊಳಗೆ ತನ್ನ ಮಡಿಲ ಕಂದಮ್ಮನನ್ನು ಬಿಟ್ಟು ಇಹಲೋಕ ಸೇರಿಹೋದÀಳು.

ಮಗುವಿನೊಂದಿಗೆ ಪ್ರೀತಿಸಿ ಕೈಹಿಡಿದ ಗಂಡನ ಮನೆ ಸೇರಬೇಕಾದ ಮುದ್ದು ಮುಖದ, ಎಲ್ಲರ ಪ್ರೀತಿಯ ಲಾಸ್ಯ ಹೆಣವಾಗಿ ಮಡಿಕೇರಿ ಆಸ್ಪತ್ರೆಯಿಂದ ತುರ್ತು ನಿಗಾ ವಾಹನದಲ್ಲಿ ವೀರಾಜಪೇಟೆಯ ಅಪ್ಪಯ್ಯ ಸ್ವಾಮಿ ರಸ್ತೆಯ ನ್ಯೂಎಕ್ಸ್ಟೆಂಸನಲ್ಲಿರುವ ಪ್ರೀತಿಯ ಗಂಡನÀ ಮನೆ ಹತ್ತಿದಳು. 26ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ ಈಕೆಯ ಅಂತಿಮ ದರ್ಶನಕ್ಕೆ ಜನಸಾಗರದ ಜೊತೆ ಪ್ರೀತಿಯ ಗುರುವನ್ನು ಕಳೆದುಕೊಂಡ ವಿದ್ಯಾರ್ಥಿಗಳು, ಶಿಕ್ಷಕ ವೃಂದದ ದುಃಖಕ್ಕೆ ಮಿತಿಯೇ ಇರಲಿಲ್ಲ. ಹೆರಿಗೆಯಾಗಿ ಬರಲು ತಡವಾಗುವದೆಂದು ಮಕ್ಕಳಿಗೆ ಪಾಠ ಚಟುವಟಿಕೆಗಳನ್ನು ಹಗಲಿರುಳೆನ್ನದೆ ದುಡಿದು ತೇಜಸ್ವಿಯಂತೆ ಕಂಗೊಳಿಸುತ್ತಾ ಪ್ರೀತಿಯ ಟೀಚರ್ ಅಮರಳಾದಳು.

ಶವವಿಟ್ಟ ಮನೆಯಲ್ಲೆಲ್ಲ ನೋವಿನ ಆಕ್ರಂದನವಾದರೆ; ಮನೆಯ ಸಮೀಪವೇ ಪ್ರಸವ ಮಾಡಿದ ವೈದ್ಯೆಯ ಮನೆ ಇದ್ದರೂ ಒಂದೇ ಕೇರಿನವರಾದರೂ ಅಂತಿಮ ದರ್ಶನಕ್ಕೂ ಬರಲೇ ಇಲ್ಲ. ನಂತರವಾದರೂ ಸಾಂತ್ವಾನ ಹೇಳಲು ಬರಲಿಲ್ಲ. ನೆರೆಹೊರೆ ಯವರಿಗೆಲ್ಲ ಹೇಳಿಸಿದ ಬಳಿಕ ಕೈತಪ್ಪಿನಿಂದ ನಡೆದದ್ದು ನಡೆದು ಹೋಯಿತು ಈ ವಿಷಯವನ್ನು ಇಲ್ಲಿಗೆ ಬಿಟ್ಟು ಬಿಡೋಣವೆಂದು ಗಂಡ ಮಗುವಿನ ತಂದೆಗೆ ಒಪ್ಪಿಸಲು ಮುಂದಾದಾಗ; ಆಗಲಿ ನನಗೆ ಪತ್ನಿ ಬೇಡ ಮಗುವಿಗೆ ತಾಯಿಯನ್ನು ಮರುಕರುಣಿಸಲಿ ಎಂದು ನೋವಿನಿಂದ ಹೇಳಿದಾಗ ಎಲ್ಲರೂ ಮೌನರಾದರು.

ಕೊನೆಯದಾಗಿ ಉಳಿಯುವ ಪ್ರಶ್ನೆಈ ಸಾವು ನ್ಯಾಯವೇ?

-ಕರುಣ್ ಕಾಳಯ್ಯ