ಶ್ರೀಮಂಗಲ, ಜು. 7: 2018-19ನೇ ಸಾಲಿನ ಹುದಿಕೇರಿ ಹೋಬಳಿ ವ್ಯಾಪ್ತಿ ರೈತರಿಗೆ ಮುಂಗಾರಿನ ಭತ್ತದ ಕೃಷಿಯಲ್ಲಿ ಬೀಜಗಳ ಉಪಚಾರ ಹಾಗೂ ಕೀಟರೋಗ ಹತೋಟಿ ಕ್ರಮದಲ್ಲಿ ಸುರಕ್ಷಿತವಾಗಿ ಕೀಟನಾಶಕ ಮತ್ತು ರೋಗನಾಶಕಗಳನ್ನು ಬಳಸುವ ಬಗ್ಗೆ ರೈತರಿಗೆ ತರಬೇತಿ ಕಾರ್ಯಕ್ರಮ ವನ್ನು ಕೃಷಿ ಇಲಾಖೆ ವತಿಯಿಂದ ತಾ.11 ರಂದು ಬೆ. 11 ಗಂಟೆಗೆ ಹುದಿಕೇರಿ ರೈತ ಸಂಪರ್ಕ ಕೇಂದ್ರದ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮದ ಪ್ರಯೋಜನವನ್ನು ಪಡೆದು ಕೊಳ್ಳಬೇಕಾಗಿ ಕೃಷಿ ಅಧಿಕಾರಿ ಎ.ಪಿ. ಮೀರಾ ಅವರು ತಿಳಿಸಿದ್ದಾರೆ.