ಗೋಣಿಕೊಪ್ಪಲು, ಜು. 5 : ಗೋಣಿಕೊಪ್ಪಲು -ಪೊನ್ನಂಪೇಟೆ-ಬಾಳೆಲೆ ಮಾರ್ಗವಾಗಿ ಸಂಚರಿಸುವ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್‍ವೊಂದು ಪೊನ್ನಂಪೇಟೆ ಕಿರುಗೂರು ರಸ್ತೆಯ ಮತ್ತೂರು ಬಳಿ ಅಪಘಾತಕ್ಕಿಡಾಗಿದ್ದು, ಅದೃಷ್ಟವಶಾತ್ ಯಾವದೇ ಪ್ರಾಣ ಹಾನಿ ಸಂಭವಿಸಿಲ್ಲ.

ಬಸ್‍ನಲ್ಲಿ ಕಡಿಮೆ ಸಂಖ್ಯೆಯಲ್ಲಿ ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಚಾಲಕನ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಬಸ್ಸು ರಸ್ತೆಯ ಎಡ ಭಾಗದ ಚರಂಡಿಗೆ ಹೋಗಿರುವದಾಗಿ ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ.ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರು ಚಾಲಕನ ಬಳಿ ಇರುವ ಬಾಗಿಲಿನ ಮೂಲಕ ಒಬ್ಬೊಬ್ಬರಾಗಿ ಹೊರ ಬಂದರು.