ಪೊನ್ನಂಪೇಟೆ, ಜು. 5: ಜೆ.ಡಿ.ಎಸ್. ಮುಖಂಡರ ನಿಯೋಗ ವೊಂದು ಸಾರಿಗೆ ಮತ್ತು ಉನ್ನತ ಶಿಕ್ಷಣ ಸಚಿವರನ್ನು ಬೆಂಗಳೂರಿನಲ್ಲಿ ಭೇಟಿ ಮಾಡಿ ಜಿಲ್ಲೆಯ ಕೆಲವು ಸಮಸ್ಯೆಗಳ ಬಗ್ಗೆ ಮನವಿ ಸಲ್ಲಿಸಿದೆ. ಈ ಭೇಟಿ ಯಿಂದಾಗಿ ಹಲವಾರು ವರ್ಷಗಳ ಬೇಡಿಕೆ ಸದÀ್ಯದಲ್ಲೇ ಈಡೇರುವ ವಿಶ್ವಾಸವಿದೆ ಎಂದು ನಿಯೋಗದಲ್ಲಿದ್ದ ಜೆ.ಡಿ.ಎಸ್. ಜಿಲ್ಲಾ ವಕ್ತಾರ ಎಂ.ಟಿ. ಕಾರ್ಯಪ್ಪ ತಿಳಿಸಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರು, ಸದ್ಯದಲ್ಲೇ ವೀರಾಜಪೇಟೆ ತಾಲೂಕಿನ ಕುಟ್ಟದಿಂದ-ಬೆಂಗಳೂರಿಗೆ ಕಾನೂರು ಮತ್ತು ಶ್ರೀಮಂಗಲ ಮಾರ್ಗವಾಗಿ ನೂತನ ವಾಲ್ವೊ ಬಸ್ ಸಂಚರಿಸಲಿದೆ ಎಂದು ತಿಳಿಸಿದ್ದಾರೆ. ಅಲ್ಲದೆ ಇಲ್ಲಿನ ಜನರ ಬಹುಕಾಲದ ಬೇಡಿಕೆಯಾಗಿರುವ ಪೆÇನ್ನಂಪೇಟೆ ಯನ್ನು ನೂತನ ತಾಲೂಕು ಆಗಿ ಘೋಷಣೆ ಮಾಡಲು, ಪೆÇನ್ನಂಪೇಟೆ ಯಲ್ಲಿ ಸರಕಾರಿ ಪ್ರಾಥಮಿPಕೇಂದ್ರವನ್ನು ಸ್ಥಾಪಿಸಲು ಮತ್ತು ಉಪ ನೋಂದಾಣಾಧಿಕಾರಿ ಕಚೇರಿಯ ನೂತನ ಕಟ್ಟಡ ನಿರ್ಮಿಸಲು ಜಿಲ್ಲಾ ಜೆ.ಡಿ.ಎಸ್. ಪರವಾಗಿ ಮುಖ್ಯಮಂತ್ರಿಗಳಿಗೆ ವಿಶೇಷ ಮನವಿ ಸಲ್ಲಿಸಿರುವದಾಗಿ ಹೇಳಿದ್ದಾರೆ.

ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣ ಅವರನ್ನು ವಿಧಾನ ಸೌಧದಲ್ಲಿ ಭೇಟಿ ಮಾಡಿ ಕುಟ್ಟದಿಂದ-ಬೆಂಗಳೂರಿಗೆ ಶ್ರೀಮಂಗಲ ಮತ್ತು ಕಾನೂರು ಮಾರ್ಗವಾಗಿ ನೂತನ ವಾಲ್ವೊ ಬಸ್ ಸಂಚಾರಕ್ಕೆ ಮನವಿ ಸಲ್ಲಿಸಿತು. ಮನವಿ ಸ್ವೀಕರಿಸಿದ ಸಚಿವರು ಸಾರಿಗೆ ಇಲಾಖೆಯ ಉನ್ನತಾಧಿಕಾರಿಗಳನ್ನು ಸಂಪರ್ಕಿಸಿ ಶೀಘ್ರದಲ್ಲೇ ಈ ರಸ್ತೆಯಲ್ಲಿ ಬಸ್ ಸಂಚಾರಕ್ಕೆ ಕ್ರಮ ತೆಗೆದುಕೊಳ್ಳುವಂತೆ ನಿರ್ದೇಶನ ನೀಡಿದ್ದಾರೆ. ಈ ಹಿಂದೆ ಈ ಮಾರ್ಗದಲ್ಲಿ ಇದ್ದ ಬಸ್ ಕೆಲವು ವರ್ಷಗಳಿಂದ ರದ್ದಾಗಿತ್ತು. ಇದೀಗ ಸಚಿವರ ಭರವಸೆ ಈಡೇರಿದರೆ ಕೇರಳ ಗಡಿಭಾಗವಾದ್ದರಿಂದ ಕುಟ್ಟ್ಟದಿಂದ À ಆರೋಗ್ಯ ಬೆಂಗಳೂರಿಗೆ ಪ್ರಯಾಣಿಸುವವರಿಗೆ ಅನುಕೂಲವಾಗಲಿದೆ ಎಂದು ಹೇಳಿದ್ದಾರೆ.

ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡ ಮತ್ತು ಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿಗಳನ್ನು ಭೇಟಿ ಮಾಡಿದ ಈ ನಿಯೋಗ, ವಿವಿಧ ಬೇಡಿಕೆಗಳ ಮನವಿ ಪತ್ರವನ್ನು ಸಲ್ಲಿಸಿತು. ಪೆÇನ್ನಂಪೇಟೆಯಲ್ಲಿ ಇದೀಗ ತಾತ್ಕಾಲಿಕ ಕಟ್ಟಡದಲ್ಲಿ ಸರಕಾರಿ ಆಸ್ಪತ್ರೆ ಕಾರ್ಯನಿರ್ವಹಿಸುತ್ತಿದ್ದು, ಇಲ್ಲಿ ಯಾವದೇ ಮೂಲಭೂತ ಸೌಕರ್ಯಗಳಿಲ್ಲ. ಅಲ್ಲದೆ ಖಾಯಂ ವೈದ್ಯರು ಇಲ್ಲದಿರುವದರಿಂದ ಕೂಡಲೇ ಪೆÇನ್ನಂಪೇಟೆಗೆ ನೂತನ ಸರಕಾರಿ ಆಸ್ಪತ್ರೆಗೆ ಕಟ್ಟಡ ಮಂಜೂರು ಮಾಡಲು ನಿಯೋಗ ಮುಖ್ಯಮಂತ್ರಿ ಗಳ ಗಮನಕ್ಕೆ ತರುವಂತೆ ಅವರ ಆಪ್ತ ಕಾರ್ಯದರ್ಶಿ ಅವರನ್ನು ಒತ್ತಾಯಿಸಿತು. ಈಗಾಗಲೇ ನೂತನ ಕಟ್ಟಡಕ್ಕೆ ಸರಕಾರಿ ಜಾಗವನ್ನು ಗುರುತಿಸಲಾಗಿದ್ದು, ಇಲ್ಲಿ ತುರ್ತಾಗಿ ನೂತನ ಕಟ್ಟಡ ನಿರ್ಮಾಣವಾಗ ಬೇಕಿರುವ ಅನಿವಾರ್ಯತೆಯನ್ನು ಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿ ಅವರಿಗೆ ನಿಯೋಗದ ಪ್ರಮುಖರು ವಿವರಿಸಿದ್ದಾರೆ ಎಂದು ಕಾರ್ಯಪ್ಪ ತಿಳಿಸಿದ್ದಾರೆ.

ಪೆÇನ್ನಂಪೇಟೆಯಲ್ಲಿ ಇದೀಗ ಉಪ ನೋಂದಣಾಧಿಕಾರಿ ಕಚೇರಿಯು ಖಾಸಗಿ ಕಟ್ಟಡದ 1ನೇ ಮಹಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ವಯಸ್ಸಾದವರಿಗೆ ಮತ್ತು ಮಹಿಳೆ ಯರಿಗೆ ತುಂಬಾ ಅನಾನುಕೂಲ ವಾಗುತ್ತಿದೆ. ಅಲ್ಲದೆ ಇಲ್ಲಿ ಯಾವದೇ ವಾಹನ ನಿಲುಗಡೆಗೆ ಅವಕಾಶವಿಲ್ಲ ದಿರುವದರಿಂದ ಪೆÇನ್ನಂಪೇಟೆ ಮಹಿಳಾ ಸಮಾಜದ ಸಮೀಪದಲ್ಲ್ಲಿ ಉಪ ನೋಂದಣಾಧಿಕಾರಿ ಕಚೇರಿಯ ನೂತನ ಕಟ್ಟಡ ನಿರ್ಮಿಸಲು ಮನವಿಯಲ್ಲಿ ಗಮನ ಸೆಳೆಯಲಾಗಿದೆ. ನಿಯೋಗದ ಮನವಿ ಸ್ವೀಕರಿಸಿದ ಉನ್ನತ ಶಿಕ್ಷಣ ಸಚಿವರು ಮತ್ತು ಮುಖ್ಯ ಮಂತ್ರಿಗಳ ಆಪ್ತ ಕಾರ್ಯದರ್ಶಿ ಈ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳುವದಾಗಿ ಭರವಸೆ ನೀಡಿದ್ದಾರೆ. ನಂತರ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ನಿಯೋಗದ ಪ್ರಮುಖರೊಂದಿಗೆ ದೂರವಾಣಿ ಮೂಲಕ ಮಾತನಾಡಿ, ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವದಾಗಿ ಆಶ್ವಾಸನೆ ನೀಡಿರುವದು ಸಮಾಧಾನ ತಂದಿದೆ ಎಂದು ಹೇಳಿದ್ದಾರೆ.

ಜೆ.ಡಿ.ಎಸ್. ನಿಯೋಗದಲ್ಲಿ ಮುಖಂಡರಾದ ಕಾರ್ಮಾಡು ಸುಬ್ಬಣ್ಣ, ಕೆ.ಆರ್. ಸುರೇಶ್, ಯು.ಟಿ. ದತ್ತಾ, ವಿನೇಷ್, ಮತ್ರಂಡ ಸುಕು ಬೋಪಣ್ಣ, ಕರ್ತಮಾಡ ನರೇಂದ್ರ ಮೊದಲಾದವರು ಇದ್ದರು ಎಂದು ಕಾರ್ಯಪ್ಪ ತಿಳಿಸಿದ್ದಾರೆ.