ಶನಿವಾರಸಂತೆ, ಜೂ. 30: ಶನಿವಾರಸಂತೆಯ ರೋಟರಿ ಹಾಗೂ ಶ್ರೀ ಮಂಜುನಾಥೇಶ್ವರ ಇಂಜಿನಿಯ ರಿಂಗ್ ವಕ್ರ್ಸ್ ಇವರ ಸಹಭಾಗಿತ್ವದಲ್ಲಿ ಇಂಜಿನಿಯರಿಂಗ್ ವಕ್ರ್ಸ್ ಮಾಲೀಕರಾದ ರೊಟೇರಿಯನ್ ಎಂ. ಮೋಹನ್ ಕುಮಾರ್ ತಾವೇ ನಿರ್ಮಿಸಿದ ಯಂತ್ರ, ಕಾಫಿ ಬೋರರ್ ಗಿಡಗಳನ್ನು ಕೇವಲ 2 ನಿಮಿಷದಲ್ಲಿ ಯಂತ್ರದ ಮೂಲಕ ಕೀಳುವ ಪ್ರಾತ್ಯಕ್ಷಿಕೆಗೆ ಚಿಕ್ಕಕೊಳತ್ತೂರು ರಸ್ತೆಯ ಪಕ್ಕದ ಬಸವೇಶ್ವರ ನಗರದ ರುದ್ರೇಶ್ ಮತ್ತು ಮಹೇಶ್ ಅವರ ಕಾಫಿ ತೋಟದಲ್ಲಿ ರೊಟೇರಿಯನ್ ... ಕ್ಲಬ್ ಅಧ್ಯಕ್ಷ ಎಚ್.ಎಸ್. ವಸಂತ್ ಕುಮಾರ್ ಚಾಲನೆ ನೀಡಿದರು.

ಮುಖ್ಯ ಅತಿಥಿ ಕಾಫಿ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಆರ್.ಪಿ. ಲಕ್ಷ್ಮಣ ಮಾತನಾಡುತ್ತಾ ರೈತ ಬೆಳೆಗಾರರಿಗೆ ಹಣಕಾಸಿನ ವಿಚಾರವನ್ನು ನೀಗಿಸಿ, ಸುಲಭವಾಗಿ ಬೋರರ್ ಗಿಡಗಳನ್ನು ಕೀಳುವ ಯಂತ್ರವನ್ನು ತಯಾರಿಸಿರುವ ಮೋಹನ್ ಕುಮಾರ್ ಅವರ ಈ ಕಾರ್ಯ ಶ್ಲಾಘನೀಯ. ಈ ಯಂತ್ರದಿಂದ ಬೋರರ್ ಗಿಡಗಳನ್ನು ಸುಲಭವಾಗಿ ಬುಡ ಸಮೇತ ಬೇರಿನೊಂದಿಗೆ ಕೀಳುವದಲ್ಲದೆ, ಹೊಸದಾಗಿ ಕಾಫಿ ಗಿಡಗಳನ್ನು ನೆಡಲು ಗುಂಡಿ ತೆಗೆಯುವ ಅವಶ್ಯಕತೆಯಿಲ್ಲ. ಈ ಯಂತ್ರವನ್ನು ಕೊಳ್ಳಲು 8-10 ಸಾವಿರ ರೂಪಾಯಿಗಳು ದೊಡ್ಡದಲ್ಲ. ಪಕ್ಕದ 2-3 ತೋಟದ ಸಣ್ಣ ಬೆಳೆಗಾರರು ಒಟ್ಟು ಸೇರಿ ಕೊಂಡುಕೊಳ್ಳಬಹುದು ಎಂದರು.

ಕಾಫಿ ಮಂಡಳಿಯ ಹಿರಿಯ ಸಂಪರ್ಕಾಧಿಕಾರಿ ಹೆಚ್. ವಿಶ್ವನಾಥ್ ಮಾತನಾಡಿ, ಬಿತ್ತನೆಯಿಂದ ಹಿಡಿದು ಕೊಯ್ಲಿನವರೆಗೂ ಈಗ ಯಾಂತ್ರೀಕರಣ ಬಂದಿದೆ. ಬೋರರ್ ಗಿಡಗಳನ್ನು ಕೀಳುವದಲ್ಲದೆ, ಕಾಫಿ ಗಿಡ ಗಳನ್ನು ನೆಡಬಹುದು. ಕೂಲಿಯನ್ನು ಉಳಿಸಿ ಒಬ್ಬರ ಎರಡು ಕೆಲಸವನ್ನು ಮಾಡಿ ಮುಗಿಸಬಹುದು ಎಂದರು.

ಕಾರ್ಯಕ್ರಮದಲ್ಲಿ ರೊಟೇರಿ ಯನ್‍ಗಳಾದ ಟಿ.ಆರ್. ಪುರು ಷೋತ್ತಮ, ಅರವಿಂದ್, ಎಸ್.ಎಸ್. ಸಾಗರ್, ಬೆಳೆಗಾರರಾದ ಹೆಚ್.ವಿ. ಸುರೇಶ್, ಚಿಣ್ಣಪ್ಪ, ಎ.ಎಂ. ಆನಂದ್, ಗಿರೀಶ್, ಚಂದ್ರ ಉಪಸ್ಥಿತರಿದ್ದರು. ಕೃಷಿ ವಿಜ್ಞಾನಿ ಎ.ಡಿ. ಮೋಹನ್‍ಕುಮಾರ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.