ಮಡಿಕೇರಿ, ಜೂ. 30: ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿ ವಯೋನಿವೃತ್ತಿ ಹೊಂದಿದ ಪೊಲೀಸ್ ಅಧಿಕಾರಿಗಳನ್ನು ಆತ್ಮೀಯವಾಗಿ ಬೀಳ್ಕೊಡಲಾಯಿತು.
ಜಿಲ್ಲಾ ಸಶಸ್ತ್ರ ದಳದ ಎ.ಆರ್.ಎಸ್.ಐ.ಎ.ಸಿ. ವಿಶ್ವನಾಥ್ ಹಾಗೂ ಡಿ.ಬಿ. ರಾಜಕುಮಾರ, ವೀರಾಜಪೇಟೆ ನಗರ ಠಾಣೆಯ ಎ.ಎಸ್.ಎ.ಪಿ.ಸಿ. ಶಿವಪ್ಪ ಹಾಗೂ ಜಿ.ಜಿ. ನಾರಾಯಣ ಸ್ವಾಮಿ, ಸುಂಟಿಕೊಪ್ಪ ಠಾಣೆಯ ಎ.ಎಸ್.ಐ. ಗುಣಶೇಖರ, ಜಿಲ್ಲಾ ಅಪರಾಧ ಪತ್ತೆ ದಳದ ಮುಖ್ಯಪೇದೆ ಎ.ಬಿ. ಗೋಪಾಲ ಅವರುಗಳು ನಿವೃತ್ತಿಯಾಗಿದ್ದು, ಮಡಿಕೇರಿ ಡಿವೈಎಸ್ಪಿ ಸುಂದರ್ರಾಜ್, ಡಿ.ಸಿಬಿ ನಿರೀಕ್ಷಕ ಉಮೇಶ್ ಉಪ್ಪಳಿಕೆ ಅವರುಗಳು ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಭಿನಂದಿಸಿ ಬೀಳ್ಕೊಟ್ಟರು. ಪೊಲೀಸ್ ಸಿಬ್ಬಂದಿಗಳು ಹಾಜರಿದ್ದರು.