ಶನಿವಾರಸಂತೆ, ಜೂ. 25: ನಿಡ್ತ ಪಂಚಾಯಿತಿ ವ್ಯಾಪ್ತಿಯ ಗೋಪಾಲಪುರ ಮುಖ್ಯ ರಸ್ತೆಯಲ್ಲಿ ಕಾರು (ನಂ. ಕೆಎ 09 ಝಡ್ 3090) ಮತ್ತೊಂದು ಮೋಟಾರು ಸೈಕಲ್‍ಗೆ (ನಂ ಕೆಎ 12 ಆರ್ 8143)ಗೆ ಡಿಕ್ಕಿ ಹೊಡೆದ ಪರಿಣಾಮ ಮೋಟಾರ್ ಸೈಕಲ್ ಜಖಂ ಗೊಂಡಿದ್ದು, ಸವಾರನಿಗೆ ಯಾವದೇ ಗಾಯಗಳಾಗಿರುವದಿಲ್ಲ.
ಗೋಪಾಲಪುರ ನಿವಾಸಿ ಜಗದೀಶ್ ಗುಡುಗಳಲೆ ಕಡೆಗೆ ಮೋಟಾರ್ ಸೈಕಲ್‍ನಲ್ಲಿ ಬರುತ್ತಿರುವಾಗ, ಗೋಪಾಲಪುರದ ರಸ್ತೆಯಲ್ಲಿ ಕಾರು ಚಾಲಕ ಹಸೈನಾರ್ ಕಾರನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ಡಿಕ್ಕಿ ಪಡಿಸಿದ ಪರಿಣಾಮ ಅವಘಡ ಸಂಭವಿಸಿದೆ. ಈ ಬಗ್ಗೆ ದೊರೆತ ದೂರಿನ ಅನ್ವಯ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.