ಗೋಣಿಕೊಪ್ಪ ವರದಿ, ಜೂ. 25: ಕುರ್ಚಿ ಗ್ರಾಮದಲ್ಲಿ ಕಾಡಾನೆಗಳ ದಾಂಧಲೆ ಮತ್ತೆ ಮುಂದುವರಿದಿದೆ. ಅಲ್ಲಿನ ಅಜ್ಜಮಾಡ ಕೆ. ಜೀವನ್ ಎಂಬವರ ತೋಟದಲ್ಲಿ 4 ಕಾಡಾನೆಗಳು ಸೇರಿಕೊಂಡು ಗಿಡಗಳನ್ನು ನಾಶ ಪಡಿಸಿವೆ. ಕಾಫಿ, ಅಡಿಕೆ ಮರಗಳನ್ನು ಮುರಿದು ಹಾಕಿವೆ. ಸ್ಥಳಕ್ಕೆ ಶ್ರೀಮಂಗಲ ವನ್ಯಜೀವಿ ವಲಯ ಸಿಬ್ಬಂದಿ ತೆರಳಿ ಪರಿಶೀಲನೆ ನಡೆಸಿದ್ದಾರೆ. ಹಲವು ದಿನಗಳ ಹಿಂದಷ್ಟೆ 12 ಆನೆಗಳ ಹಿಂಡು ಗ್ರಾಮಕ್ಕೆ ನುಸುಳಿಸಿತ್ತು. ಇಲಾಖೆ ಕಾರ್ಯಾಚರಣೆಯಿಂದ 8 ಆನೆಗಳು ಅರಣ್ಯಕ್ಕೆ ಸೇರಿದ್ದು. ಬಾಕಿ ಆನೆಗಳು ಗ್ರಾಮದಲ್ಲಿ ಉಳಿದುಕೊಂಡಿದೆ.