ಮಡಿಕೇರಿ, ಜೂ. 18: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ 2018 ಮೇ ಮಾಹೆಯ ಪ್ರಗತಿ ವರದಿಯ ಮಾಹಿತಿ ವಿವರ ಇಂತಿದೆ.

ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ ಕಾರ್ಯಕ್ರಮ: ತಿಂಗಳಲ್ಲಿ 617 ಗರ್ಭಿಣಿಯರಿಗೆ ಟಿಟಿ ಚುಚ್ಚುಮದ್ದು, 632 ಗರ್ಭಿಣಿಯರಿಗೆ ಐಎಫ್‍ಎಸ್ ಮಾತ್ರೆ ವಿತರಣೆ, 717 ಗರ್ಭಿಣಿಯರ ಭೇಟಿ, 566 ಆಸ್ಪತ್ರೆ ಹೆರಿಗೆಗಳಾಗಿವೆ. ಲಸಿಕಾ ಕಾರ್ಯಕ್ರಮದಡಿಯಲ್ಲಿ 566 ಮಕ್ಕಳು ಪೂರ್ಣ ಲಸಿಕೆ ಪಡೆದಿರುತ್ತಾರೆ. ಆರ್.ಬಿ.ಎಸ್.ಕೆ. ಕಾರ್ಯಕ್ರಮದಡಿಯಲ್ಲಿ 4531 ಮಕ್ಕಳ ಆರೋಗ್ಯ ತಪಾಸಣೆ, ಪಿ.ಎಂ.ಎಸ್.ಎಂ.ಎ. ಕಾರ್ಯಕ್ರಮದಲ್ಲಿ 288 ಗರ್ಭಿಣಿಯರ ತಪಾಸಣೆ, ಐ.ಡಿ.ಸಿ.ಎಫ್. ಕಾರ್ಯಕ್ರಮದಲ್ಲಿ 5 ವರ್ಷದೊಳಗಿನ 33144 ಮಕ್ಕಳಿರುವ ಮನೆಗಳಿಗೆ ಓಆರ್‍ಎಸ್ ವಿತರಿಸಲಾಗಿದೆ ಹಾಗೂ 61 ಅಪೌಷ್ಟಿಕ ಮಕ್ಕಳನ್ನು ಉಪಚರಿಸಲಾಗಿದೆ.

ರಾಷ್ಟ್ರೀಯ ಕುಟುಂಬ ಕಲ್ಯಾಣ ಕಾರ್ಯಕ್ರಮ: ಈ ಕಾರ್ಯಕ್ರಮದಡಿ ಲ್ಯಾಪ್ರೋಸ್ಕೋಪಿಕ್ ಶಸ್ತ್ರಚಿಕಿತ್ಸೆಗೆ ಒಳಗಾದ ಫಲಾನುಭವಿಗಳು-136, ಟ್ಯುಬೆಕ್ಟಮಿ ಶಸ್ತ್ರಚಿಕಿತ್ಸೆಗೆ ಒಳಗಾದ ಫಲಾನುಭವಿಗಳು-71, ಇದುವರೆಗೆ ಶೇ.13 ಸಾಧನೆಯಾಗಿದೆ. ಎನ್.ಎಸ್.ವಿ ಶಸ್ತ್ರಚಿಕಿತ್ಸೆಗೆ ಒಳಗಾದ ಪುರುಷ ಫಲಾನುಭವಿಗಳು-5, ವಿವಿಧ ತಾತ್ಕಾಲಿಕ ವಿಧಾನಗಳನ್ನು ಅಳವಡಿಸಿದ ಸ್ತ್ರೀಯರು-273, ನಡೆಸಿದ ಶಸ್ತ್ರಚಿಕಿತ್ಸಾ ಶಿಬಿರಗಳು-15 ಹಾಗೂ ಪ್ರಸವ ಪೂರ್ವ ಭ್ರೂಣಲಿಂಗ ಪತ್ತೆ ನಿಷೇಧ ಕಾಯಿದೆಯಡಿಯಲ್ಲಿ 7 ಸ್ಕ್ಯಾನಿಂಗ್ ಕೇಂದ್ರಗಳನ್ನು ತಪಾಸಣೆ ಮಾಡಲಾಗಿದೆ.

ರಾಷ್ಟ್ರೀಯ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಕಾರ್ಯಕ್ರಮ: ಈ ಕಾರ್ಯಕ್ರಮದಡಿ ಮಲೇರಿಯಾ ಪತ್ತೆಗೆ 13,692 ರಕ್ತಲೇಪನ ಸಂಗ್ರಹಿಸಿ ಪರೀಕ್ಷಿಸಲಾಗಿದೆ. ಡೆಂಗ್ಯೂ ನಿಯಂತ್ರಣಕ್ಕಾಗಿ 1,08,907 ಮನೆಗಳ ಲಾರ್ವಾ ಸಮೀಕ್ಷೆ ನಡೆಸಲಾಗಿದೆ. ಸೊಳ್ಳೆ ನಿಯಂತ್ರಣಕ್ಕಾಗಿ 6 ಗ್ರಾಮಗಳಲ್ಲಿ 3361 ಮನೆಗಳಿಗೆ ಸೊಳ್ಳೆ ನಿಯಂತ್ರಣ ಕ್ರಮ, ಕುಡಿಯುವ ನೀರಿನ ಸಂರಕ್ಷಣೆಗಾಗಿ 1053 ಹೆಚ್2ಎಸ್ ಮೀಡಿಯಾ ಮತ್ತು 1053 ನೀರಿನ ಮಾದರಿ ಸಂಗ್ರಹಿಸಿ ಪರೀಕ್ಷಿಸಲಾಗಿದೆ. 207 ಕುಡಿಯುವ ನೀರಿನ ಓವರ್ ಹೆಡ್ ಟ್ಯಾಂಕ್ ಶುಚಿಗೊಳಿಸಿ, ಕ್ಲೋರಿನೇಷನ್ ಪರೀಕ್ಷೆ ಮಾಡಿಸಿದೆ.

ರಾಷ್ಟ್ರೀಯ ಅಯೋಡಿನ್ ಕೊರತೆಯ ನ್ಯೂನ್ಯತೆಗಳ ನಿಯಂತ್ರಣ ಕಾರ್ಯಕ್ರಮ: ಈ ಕಾರ್ಯಕ್ರಮದಡಿಯಲ್ಲಿ 17,886 ಉಪ್ಪಿನ ಮಾದರಿಗಳಲ್ಲಿ ಅಯೋಡಿನ್ ಅಂಶ ಪರೀಕ್ಷಿಸಿ ಸೂಕ್ತ ತಿಳುವಳಿಕೆ ನೀಡಲಾಗಿದೆ ಹಾಗೂ 50 ಉಪ್ಪಿನ ಮಾದರಿಗಳು ಮತ್ತು 25 ಮೂತ್ರದ ಮಾದರಿಗಳನ್ನು ಪರೀಕ್ಷೆಗಾಗಿ ಕಳುಹಿಸಿದೆ.

ಪರಿಷ್ಕøತ ರಾಷ್ಟ್ರೀಯ ಕ್ಷಯರೋಗ ನಿಯಂತ್ರಣ ಕಾರ್ಯಕ್ರಮ: ಈ ಕಾರ್ಯಕ್ರಮದಡಿಯಲ್ಲಿ 637 ಕಫದ ಮಾದರಿ ಸಂಗ್ರಹಣೆ ಮಾಡಲಾಗಿದ್ದು, ಇದುವರೆಗೆ ಶೇ. 35 ಗುರಿ ಸಾಧಿಸಲಾಗಿದೆ. ಹಾಗೂ ಪತ್ತೆಯಾದ 36 ಹೊಸ ರೋಗಿಗಳಿಗೆ ಚಿಕಿತ್ಸೆ ಪ್ರಾರಂಭಿಸಿದ್ದು, ಇದುವರೆಗೆ ಶೇ. 12 ಗುರಿ ಸಾಧಿಸಲಾಗಿದೆ. 20 ಜನರು ಚಿಕಿತ್ಸೆ ಮುಗಿಸಿ ಗುಣಮುಖರಾಗಿದ್ದಾರೆ.

ರಾಷ್ಟ್ರೀಯ ಅಂಧತ್ವ ನಿಯಂತ್ರಣ ಕಾರ್ಯಕ್ರಮ: ಈ ಕಾರ್ಯಕ್ರಮದಡಿಯಲ್ಲಿ 105 ಫಲಾನುಭವಿಗಳಿಗೆ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಇದುವರೆಗೆ ಶೇ. 12 ಗುರಿ ಸಾಧಿಸಿದೆ.

ರಾಷ್ಟ್ರೀಯ ಏಡ್ಸ್ ನಿಯಂತ್ರಣ ಕಾರ್ಯಕ್ರಮ: ಈ ಕಾರ್ಯಕ್ರಮದಡಿಯಲ್ಲಿ 2705 ರೋಗಿಗಳನ್ನು ಪರೀಕ್ಷಿಸಲಾಗಿದೆ. ತಿಂಗಳಲ್ಲಿ 13 ಹೆಚ್.ಐ.ವಿ. ಪಾಸಿಟಿವ್ ಪತ್ತೆಯಾಗಿದ್ದು, ಎಆರ್‍ಟಿ ಚಿಕಿತ್ಸೆ ಪ್ರಾರಂಭಿಸಲಾಗಿದೆ ಹಾಗೂ 7 ಕಡೆಗಳಲ್ಲಿ ಹೆಚ್.ಐ.ವಿ/ಏಡ್ಸ್ ಜಾಗೃತಿ ಕಾರ್ಯಕ್ರಮ ನಡೆಸಲಾಗಿದೆ.

ಆರೋಗ್ಯ ಶಿಕ್ಷಣ ಚಟುವಟಿಕೆಗಳು: ತಿಂಗಳಲ್ಲಿ 54 ಶಾಲಾ-ಕಾಲೇಜುಗಳಲ್ಲಿ, 67 ಗ್ರಾಮ ಆರೋಗ್ಯ ನೈರ್ಮಲ್ಯ ಸಮಿತಿಗಳಲ್ಲಿ, 217 ತಾಯಂದಿರ ಸಭೆಗಳಲ್ಲಿ, 192 ಅಂಗನವಾಡಿ ಕೇಂದ್ರಗಳಲ್ಲಿ, 28 ಆಶಾ ಕಾರ್ಯಕತೆಯರ ಸಭೆಗಳಲ್ಲಿ, 114 ಸ್ತ್ರೀ ಶಕ್ತಿ ಸಂಘಗಳಲ್ಲಿ, 5 ಸ್ವಯಂ ಸೇವಾ ಸಂಸ್ಥೆಗಳಲ್ಲಿ ಎಲ್ಲಾ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ ಬಗ್ಗೆ ಆರೋಗ್ಯ ಶಿಕ್ಷಣ ನೀಡಲಾಗಿದೆ.

ವಿಶೇಷವಾಗಿ ನಿಫಾ ವೈರಸ್, ಡೆಂಗ್ಯೂ ಕುರಿತಾಗಿ ಕರಪತ್ರ ಮತ್ತು ಭಿತ್ತಿಪತ್ರಗಳನ್ನು ಮಾಡಿಸಿ ಆಶಾ ಕಾರ್ಯಕರ್ತೆಯರ ಮುಖಾಂತರ ವಿತರಿಸಲಾಗಿದೆ. ಜಿಲ್ಲೆಯಾದ್ಯಂತ 1,128 ಗುಂಪು ಸಭೆಗಳನ್ನು ನಡೆಸಿದೆ ಹಾಗೂ 33 ಕಡೆಗಳಲ್ಲಿ ವಿಶ್ವ ತಂಬಾಕು ರಹಿತ ದಿನಾಚರಣೆ ಕುರಿತು ಜಾಥಾ, ಅರಿವು ಕಾರ್ಯಕ್ರಮಗಳನ್ನು ನಡೆಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಜೇಶ್ ತಿಳಿಸಿದ್ದಾರೆ.