ಬಲ್ಯಮುಂಡೂರು : ಬಲ್ಯಮುಂಡೂರುವಿನಲ್ಲಿ ನೀರಿನ ಹರಿವಿಗೆ ತಡೆಯುಂಟಾಗಿರುವ ಹಿನ್ನೆಲೆಯಲ್ಲಿ ಕಾಫಿ ತೋಟ ಹಾಗೂ ಭತ್ತದ ಗದ್ದೆಗಳು ಜಲಾವೃತಗೊಂಡಿವೆ. ರಸ್ತೆಯೂ ಅಪಾಯದಂಚಿನಲ್ಲಿದೆ.

-ಎಂ.ಕೆ. ಮಂದಣ್ಣ, ಬಲ್ಯಮುಂಡೂರುಎಸ್. ಕಟ್ಟೆಮಾಡು: ಕಟ್ಟೆಮಾಡು ಗ್ರಾಮದ ಅಚ್ಚಕಾಳೇರ ಸಾಬು ಮುತ್ತಪ್ಪ ಅವರ ತೋಟದಲ್ಲಿ ಭಾರೀ ಗಾತ್ರದ ನೇರಳೆ ಮರ ಉರುಳಿಬಿದ್ದು, ಅರ್ಧ ಎಕರೆಯಷ್ಟು ತೋಟದಲ್ಲಿನ ಅರೇಬಿಕಾ, ರೋಬಸ್ಟ್ ಗಿಡಗಳು, ಕರಿಮೆಣಸು ಬಳ್ಳಿಗಳು ನಾಶವಾಗಿದೆ.ವೀರಾಜಪೇಟೆ : ತಾಲೂಕು ಕೇಂದ್ರ ವೀರಾಜಪೇಟೆಯಲ್ಲಿರುವ ಮಿನಿ ವಿಧಾನ ಸೌಧಕ್ಕೆ ತೆರಳಲು ಮಳೆ ಸುರಿದ ಸಂದರ್ಭ ಪರದಾಡಬೇಕಾಗಿದೆ. ಆವರಣದೆಲ್ಲೆಡೆ ಕೆಸರಿನಿಂದ ಆವೃತ್ತವಾಗಿದೆ.

-ಆರ್.ಸುರೇಶ್, ನೆಹರು ನಗರ, ವೀರಾಜಪೇಟೆ

ಮಾದಾಪುರ: ಮಾದಾಪುರದಿಂದ ಗರ್ವಾಲೆ - ಸೂರ್ಲಬ್ಬಿ, ಸೋಮವಾರಪೇಟೆಗೆ ತೆರಳುವ ಸಂಪರ್ಕ ರಸ್ತೆಗೆ ಅಡ್ಡಲಾಗಿ ಭಾರೀ ಗಾತ್ರದ ಮರ ಬಿದಿದ್ದು, ವಾಹನ ಸಂಚಾರಕ್ಕೆ ಅಡಚಣೆಯಾಗಿದೆ. ಗರ್ವಾಲೆ-ಸೂರ್ಲಬ್ಬಿ ಗ್ರಾಮ 20 ದಿನಗಳಿಂದ ವಿದ್ಯುತ್ ಇಲ್ಲದೆ ಕತ್ತಲಲ್ಲಿ ಮುಳುಗಿದೆ.

-ಸುಜು, ಗರ್ವಾಲೆ

ಕಾರುಗುಂದ : ಕಾರುಗುಂದ - ಕಡಿಯತ್ತೂರು ರಸ್ತೆ ಮೇಲೆ ಕಾವೇರಿ ನೀರು ಹರಿಯುತ್ತಿದ್ದು, ಸಂಚಾರಕ್ಕೆ ಅಡಚಣೆಯಾಗಿದೆ.

- ಮಿಲನ್ ಬೈಚನ

ಬೋಯಿಕೇರಿ: ಬೋಯಿಕೇರಿ ತಿರುವಿನ ಬಳಿ ಹಾಗೂ ಸ್ವಲ್ಪ ಮುಂದೆ ಕಸದ ರಾಶಿ ಕೊಳೆತು ನಾರುತ್ತಿದ್ದು, ಊರ ಜನ ಸುಮ್ಮನಿದ್ದಾರಲ.್ಲ?

- ಮೋಂತಿ ಗಣೇಶ್, ಮಡಿಕೇರಿ

ಬೇಟೋಳಿ : ವೀರಾಜಪೇಟೆ ತಾಲೂಕಿನ ಬೇಟೋಳಿ ಗ್ರಾಮದಲ್ಲಿ ರಸ್ತೆಯೊಂದರ ದುಸ್ಥಿತಿ

ಪೇರೂರು : ಇತ್ತೀಚೆಗೆ ಸುರಿದ ಮಳೆಗೆ ಪೇರೂರು ಗ್ರಾಮದಲ್ಲಿನ ರಸ್ತೆಗಳು ಹಾಳಾಗಿದ್ದು, ಗ್ರಾಮದ ಯುವಕರು ಶ್ರಮದಾನದ ಮೂಲಕ ದುರಸ್ತಿ ಪಡಿಸಿದರು.

- ಚಂಗೇಟಿರ ಕುಮಾರ್ ಸೋಮಣ್ಣ, ಗ್ರಾ.ಪಂ. ಸದಸ್ಯ