ಬಲಮುರಿ: ಬಲಮುರಿ ಗ್ರಾಮದ ರಸ್ತೆ ಬದಿಯ ತೋಟದೊಳಗೆ ವಿದ್ಯುತ್ ತಂತಿ ಮೇಲೆ ಮರ ಬಿದ್ದು ಕಳೆದೆರಡು ವಾರದಿಂದ ನೇತಾಡುತ್ತಿದೆ. ಸಂಬಂಧಿಸಿದವರಿಗೆ ತಿಳಿಸಿದರೂ ಗಮನ ಹರಿಸುತ್ತಿಲ್ಲ. ಅಪಾಯ ಕಾದಿದ್ದು, ಕೂಡಲೇ ತೆರವುಗೊಳಿಸಬೇಕಿದೆ.
-ಮಧು ಪೊನ್ನಚನ, ಬಲಮುರಿತಲ್ತರೆಶೆಟ್ಟಳ್ಳಿ: ಸೋಮವಾರಪೇಟೆ ತಾಲೂಕಿನ ತಲ್ತರೆಶೆಟ್ಟಳಿಯಲ್ಲಿ ಬಗ್ಗನ ಮನೆಯ ಬಳಿ ಭೂಕುಸಿತಗೊಂಡು ಆವರಣ ಗೋಡೆ ನೆಲಕಚ್ಚಿ ನಷ್ಟ ಸಂಭವಿಸಿದೆ. -ಬಿ.ಡಿ. ಚಂಗಪ್ಪ, ತಲ್ತರೆಶೆಟ್ಟಳ್ಳಿಅರೆಕಾಡು: ಅರೆಕಾಡು ಗ್ರಾಮದ ರಂಗಸ್ವಾಮಿ ಅವರ ಮನೆಯ ಬಳಿ ಭೂಕುಸಿದಿದ್ದು, ಮನೆ ಅಪಾಯದಂಚಿನಲ್ಲಿದೆ. -ರಂಗಸ್ವಾಮಿಕಾಂತೂರು: ಕಾಂತೂರು-ಮೂರ್ನಾಡು ಗ್ರಾಮದ ಉಳುವಾರನ ಲೀಲಾವತಿ ಅವರ ಮನೆಗೆ ಹಾನಿಯಾಗಿ ನಾಲ್ಕು ತಿಂಗಳು ಕಳೆದಿದೆ. ಪರಿಹಾರಕ್ಕೆ ಅರ್ಜಿ ಹಾಕಿದ್ದು, ಪಂಚಾಯಿತಿಯವರು ಬಂದು ನೋಡಿ ಹೋದವರು ಮತ್ತೆ ಯಾವದೇ ಸದ್ದಿಲ್ಲ. ಸಂಬಂಧಿಸಿದವರು ಕೂಡಲೇ ಪರಿಹಾರ ಕೊಡಿಸಿ. -ಲೀಲಾವತಿಕಾಂತೂರು: ಕಾಂತೂರು-ಮೂರ್ನಾಡು ಗ್ರಾಮದ ಉಳುವಾರನ ಲೀಲಾವತಿ ಅವರ ಮನೆಗೆ ಹಾನಿಯಾಗಿ ನಾಲ್ಕು ತಿಂಗಳು ಕಳೆದಿದೆ. ಪರಿಹಾರಕ್ಕೆ ಅರ್ಜಿ ಹಾಕಿದ್ದು, ಪಂಚಾಯಿತಿಯವರು ಬಂದು ನೋಡಿ ಹೋದವರು ಮತ್ತೆ ಯಾವದೇ ಸದ್ದಿಲ್ಲ. ಸಂಬಂಧಿಸಿದವರು ಕೂಡಲೇ ಪರಿಹಾರ ಕೊಡಿಸಿ. -ಲೀಲಾವತಿಬಾಡಗರಕೇರಿ-ಪೊರಾಡ್ನಲ್ಲಿ ಬರೆ ಕುಸಿತದಿಂದ ಮನೆ ಹಿಂಭಾಗ ಜಖಂಗೊಂಡಿದೆ. -ಮಲ್ಲೇಂಗಡ ಕೀರ್ತಿಕಾಲೂರು: ಕಾಲೂರುವಿಗೆ ತೆರಳುವ ರಸ್ತೆಯಲ್ಲಿ ಐಲಪಂಡ ಕುಟುಂಬದ ಮನೆಯ ಬಳಿ ಭೂಕುಸಿತವಾಗುತ್ತಿದೆ. ಅರ್ಧ ರಸ್ತೆಯಲ್ಲಿ ಮಣ್ಣು ಬಿದ್ದಿದ್ದು, ಸಂಬಂಧಿಸಿದ ಪಂಚಾಯಿತಿಗೆ ಮಾಹಿತಿ ನೀಡಿದರೂ ಯಾರೂ ಗಮನ ಹರಿಸುತ್ತಿಲ್ಲ. ಮಳೆ ಮುಂದುವರಿದರೆ ರಸ್ತೆ ಸಂಪೂರ್ಣ ಬಂದ್ ಆಗುವ ಸಾಧ್ಯತೆಯಿದೆ. ಮಣ್ಣು ತೆರವುಗೊಳಿಸುವ ಕಾರ್ಯವಾಗಬೇಕಿದೆ.
- ಕೊರಿಯಾರ್ ಪ್ರವೀಣ್
ಬಲಮುರಿ: ಬಲಮುರಿ ಗ್ರಾಮದಲ್ಲಿ ಕಾವೇರಿ ನದಿ ಉಕ್ಕಿ ಹರಿಯುತ್ತಿದ್ದು, ಹಳೆ ಸೇತುವೆ ಮುಳುಗಿದೆ. ಪ್ರವಾಹದ ನೀರು ರಸ್ತೆ ಮೇಲೆ ಹರಿದು, ದೇವಾಲಯದ ಒಳಗೆ ತಲಪಿದೆ.
- ಪಳುವಂಡ ವಿನಯ್ ಪೂವಯ್ಯನಾಲ್ಕೇರಿ-ಪಲ್ಲೇರಿ ರಸ್ತೆಯಲ್ಲಿ ನೀರು. - ನಿಖಿಲ್ಕೆದಕಲ್: ಕೆದಕಲ್ನ ಸೀತಾ ಎಸ್ಟೇಟ್ಗಾಗಿ ಸಾಗುವ ರಸ್ತೆ ಬದಿಯಿರುವ ವಿದ್ಯುತ್ ಕಂಬ ಮಳೆಯಿಂದ ಹಾನಿಗೀಡಾಗಿದ್ದು, ರಸ್ತೆಗೆ ಬಾಗಿಕೊಂಡಿದೆ. ವಾಹನಗಳು ಸಂಚರಿಸುವಾಗ ಕಂಬಕ್ಕೆ ತಗಲುತ್ತಿದ್ದು, ಅಪಾಯದ ಪರಿಸ್ಥಿತಿ ಇದೆ. ಸಂಬಂಧಿಸಿದವರು ತೆರವುಗೊಳಿಸುವದೊಳಿತು.
-ಪುಲ್ಲೇರ ವಸಂತ್, ಕೆದಕಲ್ಪೊರಾಡ್ನಲ್ಲಿ ಗದ್ದೆ ಹಾನಿಗೀಡಾಗಿದೆ. ಇದರೊಂದಿಗೆ ಮನೆ ಸುತ್ತಲಿನ ಬರೆಯೂ ಕುಸಿದಿದೆ. -ಮಲ್ಲೇಂಗಡ ಕೆ. ಪೆಮ್ಮಯ್ಯಶ್ರೀಮಂಗಲದಲ್ಲಿ ಅಪಾಯಕಾರಿ ಸನ್ನಿವೇಶ ಎದುರಾಗಿದ್ದು, ಜಿಲ್ಲಾಡಳಿತ ಗಮನ ಹರಿಸಬೇಕು. -ಕಾವ್ಯ