ಗೋಣಿಕೊಪ್ಪ ವರದಿ, ಜೂ. 13: ಮಂಗಳವಾರ ರಾತ್ರಿ ಪೊನ್ನಂಪೇಟೆ ಹುದಿಕೇರಿ ರಸ್ತೆಯಲ್ಲಿ ಬೈಕ್- ಕಾರು ಮುಖಾಮುಖಿ ಡಿಕ್ಕಿಯಾಗಿ ಬೈಕ್ ಸವಾರನಿಗೆ ಗಾಯವಾಗಿದೆ. ದೇವರಪುರದ ಗಣೇಶ್ ಎಂಬವರು ಬೈಕ್‍ನಲ್ಲಿ ತೆರಳುತ್ತಿದ್ದಾಗ ಶ್ರೀಮಂಗಲದ ಬೋಪಣ್ಣ ಎಂಬವರು ಚಲಾಯಿಸುತ್ತಿದ್ದ ಕಾರು ಡಿಕ್ಕಿಯಾಗಿದೆ. ಗಣೇಶ್ ಅವರ ಕಾಲಿಗೆ ಗಾಯ ವಾಗಿದೆ. ಗಣೇಶ್ ಪೊನ್ನಂಪೇಟೆ ಕಡೆ ಬೈಕ್‍ನಲ್ಲಿ ಬರುತ್ತಿದ್ದರು. ಕಾರು ಶ್ರೀಮಂಗಲ ಕಡೆ ತೆರಳುತ್ತಿತ್ತು.