ಮಡಿಕೇರಿ, ಜೂ. 13: ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ವತಿಯಿಂದ ತಾ. 29, 30 ಹಾಗೂ ಜುಲೈ 1 ರ ತನಕ ಮೂರು ದಿನಗಳ ಕಾಲ ಶಿವಮೊಗ್ಗ ನಗರದ ಕುವೆಂಪು ಕಲಾಮಂದಿರದಲ್ಲಿ ಅಖಿಲ ಕರ್ನಾಟಕ ಕನ್ನಡ ವಿಜ್ಞಾನ ಸಮ್ಮೇಳನ ಜರುಗಲಿದೆ.
ಸಮ್ಮೇಳನದಲ್ಲಿ ನಾಡಿನ ಹೆಸರಾಂತ ವಿಜ್ಞಾನಿಗಳು, ಲೇಖಕರು, ವಿಜ್ಞಾನ ಸಂವಹನಕಾರರು, ಚಿಂತಕರು ಭಾಗವಹಿಸಿ ವಿಜ್ಞಾನಕ್ಕೆ ಸಂಬಂಧಿಸಿದ ವೈವಿಧ್ಯಮಯ ಹಾಗೂ ಪ್ರಚಲಿತ ವಿಜ್ಞಾನದ ಬೆಳವಣಿಗೆ ಕುರಿತು ಉಪನ್ಯಾಸ/ವಿಚಾರಗೋಷ್ಠಿ, ವಿಜ್ಞಾನ ಸಂಪನ್ಮೂಲ ಒದಗಿಸಲಿದ್ದಾರೆ.
ಆಸಕ್ತರು, ಶಿಕ್ಷಕರು ಹಾಗೂ ವಿಜ್ಞಾನಾಸಕ್ತರು ಈ ಸಮ್ಮೇಳನದಲ್ಲಿ ಪ್ರತಿನಿಧಿಗಳಾಗಿ ಭಾಗವಹಿಸಿ ಸಮ್ಮೇಳನದ ಸದುಪಯೋಗ ಪಡೆದುಕೊಳ್ಳಬಹುದು ಎಂದು ರಾಜ್ಯ ವಿಜ್ಞಾನ ಪರಿಷತ್ತಿನ ಜಿಲ್ಲಾ ಸಮಿತಿ ಕಾರ್ಯದರ್ಶಿ ಟಿ.ಜಿ. ಪ್ರೇಮಕುಮಾರ್ ಕೋರಿದ್ದಾರೆ.
ಸಮ್ಮೇಳನದಲ್ಲಿ ಪ್ರತಿನಿಧಿಗಳಿಗೆ ಊಟ ಹಾಗೂ ವಸತಿ ಸೌಲಭ್ಯ ಕಲ್ಪಿಸಲಾಗಿದೆ. ಸಮ್ಮೇಳನದಲ್ಲಿ ಭಾಗವಹಿಸುವ ಶಿಕ್ಷಕರು-ನೌಕರರಿಗೆ ಓಓಡಿ ಸೌಲಭ್ಯವಿದೆ. ಪ್ರತಿನಿಧಿಗಳು ತಾ. 17 ರೊಳಗಾಗಿ ನೋಂದಣಿ ಶುಲ್ಕ ರೂ. 100 ನ್ನು ಪಾವತಿಸಿ ಅರ್ಜಿ ಸಲ್ಲಿಸಬೇಕು.
ನೋಂದಣಿ ಹಾಗೂ ಅರ್ಜಿಗಾಗಿ ರಾಜ್ಯ ವಿಜ್ಞಾನ ಪರಿಷತ್ತಿನ ಜಿಲ್ಲಾ ಸಮಿತಿಯ ಅಧ್ಯಕ್ಷ ಫಿಲಿಪ್‍ವಾಸ್ (ಮೊ. 98800 24070), ಕಾರ್ಯದರ್ಶಿ ಟಿ.ಜಿ. ಪ್ರೇಮಕುಮಾರ್ (ಮೊ. 94485 88352), ಅಥವಾ ಉಪಾಧ್ಯಕ್ಷ ಎಂ.ಎನ್. ವೆಂಕಟನಾಯಕ್ (ಮೊ 90088 99305) ಇವರನ್ನು ಸಂಪರ್ಕಿಸಬಹುದಾಗಿದೆ.