ವೀರಾಜಪೇಟೆ, ಜೂ. 10: ಆರು ದಶಕಗಳ ಇತಿಹಾಸವಿರುವ ಪ್ರತಿಷ್ಠಿತ ವೀರಾಜಪೇಟೆ ಪಟ್ಟಣ ಪಂಚಾಯಿತಿಗೆ ಮುಂದಿನ ಜುಲೈ ತಿಂಗಳ ಕೊನೆಯ ವಾರದಲ್ಲಿ ಚುನಾವಣೆ ನಡೆಯಲಿದ್ದು, ಮತದಾರರ ಪಟ್ಟಿಯ ಪರಿಷ್ಕರಣೆಯಂತೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯ 18 ಸ್ಥಾನಗಳಿಗೆ ಮೀಸಲಾತಿಯನ್ನು ನಿಗದಿಪಡಿಸಿ ಬೆಂಗಳೂರಿನ ಪೌರಾಡಳಿತ ನಿರ್ದೇಶನಾಲಯ ಆದೇಶ ಹೊರಡಿಸಿದೆ.

ಆಧಾರದ ಮೇಲೆ ವಿಭಜನೆ ಮಾಡಿ ಎರಡು ಸ್ಥಾನಗಳನ್ನು ಹೆಚ್ಚಿಸಿ ಹದಿನೆಂಟು ಸ್ಥಾನಗಳನ್ನು ನಿಗಧಿಪಡಿಸಲಾಗಿದೆ. ಸ್ಥಾನಗಳ ಪರಿಷ್ಕರಣೆಯಂತೆ ಅತಿ ಹೆಚ್ಚು ಮತದಾರರನ್ನು ಹೊಂದಿರುವ ಶಿವಕೇರಿ ಹಾಗೂ ನೆಹರೂನಗರವನ್ನು ವಿಭಜಿಸಿ ನಾಲ್ಕು ಸ್ಥಾನಗಳನ್ನಾಗಿ ವಿಂಗಡಿಸಲಾಗಿದೆ. ಉಳಿದಂತೆ ಎಲ್ಲ ವಾರ್ಡ್‍ಗಳು ಯಥಾ ಸ್ಥಿತಿಯಲ್ಲಿ ಮುಂದುವರೆಯಲಿದೆ. ಇಲ್ಲಿನ ಪಟ್ಟಣ ಪಂಚಾಯಿತಿ ಈಗಾಗಲೇ ಪರಿಷ್ಕøತ ಮತದಾರರ ಪಟ್ಟಿಯನ್ನು ಅಂತಿಮಗೊಳಿಸಿ ತಾಲೂಕು ಸಹಾಯಕ ಚುನಾವಣಾಧಿಕಾರಿಗೆ ಸಲ್ಲಿಸಿದೆ. ಇದೇ ಸಂದರ್ಭದಲ್ಲಿ ಮತದಾರರ ಪಟ್ಟಿಯಲ್ಲಿ ಕಂಡು ಬಂದ ಲೋಪದೋಷಗಳನ್ನು ಸರಿಪಡಿಸಲಾಗಿದೆ. ಕೊಡಗು ಜಿಲ್ಲಾಧಿಕಾರಿಯವರು ಚುನಾವಣೆಯ ದಿನಾಂಕವನ್ನು ಸಧ್ಯದಲ್ಲಿಯೇ ನಿಗಧಿ ಪಡಿಸಿ ಪ್ರಕಟಣೆ ಹೊರಡಿಸುವದಾಗಿ ಹೇಳಲಾಗಿದೆ.

ಮೀಸಲು ವಿವರ: ವೀರಾಜಪೇಟೆ ಪಟ್ಟಣ ಪಂಚಾಯಿತಿಯ ವಾರ್ಡ್ ನಂ.1 ಚರ್ಚ್ ರಸ್ತೆ ಬಿ.ಸಿ.ಎಂ. ಎ ಮಹಿಳಾ ಮೀಸಲು, ವಾರ್ಡ್ ನಂ2 ದೇವಾಂಗ ಬೀದಿ ಸಾಮಾನ್ಯ,

ವಾರ್ಡ್ ನಂ.3 ಅರಸುನಗರ ಸಾಮಾನ್ಯ, ವಾರ್ಡ್ ನಂ. 4 ತೆಲುಗರಬೀದಿ ಎಸ್.ಸಿ. ಮಹಿಳೆ, ವಾರ್ಡ್ ನಂ. 5 ಮೊಗ್ರಗಲ್ಲಿ (ಬಂಗಾಳಬೀದಿ) ಬಿ.ಸಿ.ಎಂ. (ಎ), ವಾರ್ಡ್ ನಂ. 6 ಹರಿಕೇರಿ ಎಸ್.ಸಿ., ವಾರ್ಡ್ ನಂ. 7 ನೆಹರೂನಗರ (1) ಸಾಮಾನ್ಯ ಮಹಿಳೆ, ವಾರ್ಡ್ ನಂ 8 ನೆಹರೂನಗರ (2) ಬಿ.ಸಿ.ಎಂ. (ಬಿ), ವಾರ್ಡ್ ನಂ 9, ಸುಭಾಷ್‍ನಗರ ಬಿ.ಸಿ.ಎಂ. (ಎ) ಮಹಿಳೆ, ವಾರ್ಡ್ ನಂ.10 ನಿಸರ್ಗ ಲೇ ಔಟ್ ಸಾಮಾನ್ಯ.... ವಾರ್ಡ್ ನಂ. 11 ಪಂಜರ್‍ಪೇಟೆ ಸಾಮಾನ್ಯ.... ವಾರ್ಡ್ ನಂ. 12 ಮೀನುಪೇಟೆ ಸಾಮಾನ್ಯ ಮಹಿಳೆ, ವಾರ್ಡ್ ನಂ. 13 ಮೀನುಪೇಟೆ (2) ಬಿಸಿಎಂ (ಎ) ವಾರ್ಡ್ ನಂ. 14 ಗೌರಿಕೆರೆ ಸಾಮಾನ್ಯ, ವಾರ್ಡ್ ನಂ. 15 ಗಾಂಧಿನಗರ ಎಸ್.ಟಿ., ವಾರ್ಡ್ ನಂ16 ಚಿಕ್ಕಪೇಟೆ ಬಿ.ಸಿ.ಎಂ. (ಎ) ವಾರ್ಡ್ ನಂ 17 ಮೈಕ್ರೋವೇವ್ ಸಾಮಾನ್ಯ ಮಹಿಳೆ, ವಾರ್ಡ್ ನಂ. 18 ಶಿವಕೇರಿ (2) ಸಾಮಾನ್ಯ ಮಹಿಳೆಗೆ ಮೀಸಲಿರಿಸಲಾಗಿದೆ.