ಮಡಿಕೇರಿ, ಜೂ. 9: ವ್ಯಕ್ತಿಯೋರ್ವರು ನಾಪತ್ತೆಯಾಗಿರುವ ಕುರಿತು ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮಡಿಕೇರಿ ಕೆ.ಎಸ್.ಆರ್.ಟಿ.ಸಿ. ಡಿಪೋದಲ್ಲಿ ಮೆಕಾನಿಕ್ ಆಗಿ ಕೆಲಸ ಮಾಡಿಕೊಂಡು ಮಡಿಕೇರಿ ನಗರದ ಮಂಗಳಾದೇವಿ ನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಲೋಕೇಶ್ ನಾಯ್ಕ ಎಂಬವರು ಮೇ 15 ರಿಂದ ನಾಪತ್ತೆಯಾಗಿದ್ದಾರೆ ಎಂದು ಅವರ ಸಹೋದರ ಗೋವಿಂದನಾಯ್ಕ ದೂರು ನೀಡಿದ್ದಾರೆ.
ತನ್ನ ಸ್ವಂತ ಊರಾದ ಬಳ್ಳಾರಿ ಜಿಲ್ಲೆಯ ಬಂಡೆ ಬಸಪುರ ತಾಂಡ ಗ್ರಾಮದಿಂದ ತನ್ನ ತಂದೆಯವರಿಂದ ರೂ. 50 ಸಾವಿರ ಹಣ ಪಡೆದು ಕೊಂಡು ಬಂದು ಕರ್ತವ್ಯಕ್ಕೂ ಹೋಗದೆ ಎಲ್ಲಿ ಹೋಗಿರುತ್ತಾರೆಂದು ತಿಳಿದಿರುವದಿಲ್ಲ. ಎಲ್ಲಾ ಕಡೆ ಹುಡುಕಾಡಿದರೂ ಪತ್ತೆಯಾಗಿಲ್ಲ ಎಂದು ಪುಕಾರಿನಲ್ಲಿ ತಿಳಿಸಲಾಗಿದೆ.
ಈ ಬಗ್ಗೆ ಮಾಹಿತಿ ದೊರೆತಲ್ಲಿ ದೂರವಾಣಿ ಮಡಿಕೇರಿ ನಗರ ಪೊಲೀಸ್ ಠಾಣೆ 08272229333. ಪೊಲೀಸ್ ಉಪ ನಿರೀಕ್ಷಕರು ಮಡಿಕೇರಿ 9480804945 ಸಂಪರ್ಕಿಸು ವಂತೆ ಪೊಲೀಸ್ ಪ್ರಕಟಣೆ ಕೋರಿದೆ.