ಮಡಿಕೇರಿ, ಜೂ. 9: ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುವ ನಿರಂತರ ಪ್ರಯತ್ನಗಳ ಮಧ್ಯೆ ವಿಶ್ವಕವಿ ಮತ್ತು ಗುರುದೇವ ರವೀಂದ್ರನಾಥ್ ಠಾಕೂರ್ ರಚಿತ ಭಾರತದ ರಾಷ್ಟ್ರಗೀತೆಯನ್ನು ಹೀನಾಯಗೊಳಿಸುವ ವ್ಯವಸ್ಥಿತ ಹುನ್ನಾರ ದೇಶದಾದ್ಯಂತ ನಡೆಯುತ್ತಿದೆ. ಇದಕ್ಕಾಗಿ ದೊಡ್ಡ ವರ್ಗವೊಂದು ಅವಿರತವಾಗಿ ಕೆಲಸ ಮಾಡುತ್ತಿದೆ ಎಂದು ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ಇಂಗ್ಲೀಷ್ ಭಾಷಾ ಪ್ರಾಧ್ಯಾಪಕ ಎಚ್. ಪಟ್ಟಾಭಿರಾಮ ಸೋಮಯಾಜಿ ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ಸೌಹಾರ್ದ ಕೊಡಗು ವೇದಿಕೆ ವತಿಯಿಂದ ಇಲ್ಲಿನ ಬಾಲಭವನ ಸಭಾಂಗಣದಲ್ಲಿ ಶನಿವಾರದಂದು ನಡೆದ ವಿಶ್ವಕವಿ ಗುರುದೇವ ರವೀಂದ್ರನಾಥ್ ಠಾಕೂರ್ ಅವರ ಜಯಂತಿ ಆಚರಣೆಯನ್ನು ವಿಶ್ವಕವಿ ಚಿತ್ರ ಬಿಡಿಸುವ ಮೂಲಕ ಉದ್ಘಾಟಿಸಿ ನಂತರ ವಿಶೇಷ ಉಪನ್ಯಾಸ ನೀಡಿದ ಅವರು, ಠಾಕೂರ್ ಅವರ ಚಿಂತನೆ ತೀರಾ ವಿಶಾಲವಾಗಿತ್ತು. ಮಹಾತ್ಮಗಾಂಧೀಜಿಯವರ ಕಲ್ಪನೆ ಸ್ವರಾಜ್ಯದ ಹಿನ್ನೆಲೆಯದ್ದಾಗಿದ್ದರೆ ವಿಶ್ವಕವಿ ರವೀಂದ್ರನಾಥ್ ಠಾಕೂರ್ ವಿಶ್ವಕವಿ ಗುರುದೇವ ರವೀಂದ್ರನಾಥ್ ಠಾಕೂರ್ ಅವರ ಜಯಂತಿ ಆಚರಣೆಯ ಅಂಗವಾಗಿ ಶನಿವಾರದಂದು ಸೌಹಾರ್ದ ಕೊಡಗು ವೇದಿಕೆ ವತಿಯಿಂದ ವಿದ್ಯಾರ್ಥಿಗಳಿಗಾಗಿ ರವೀಂದ್ರನಾಥ್ ಠಾಕೂರ್ ಅವರ ಚಿತ್ರ ಬಿಡಿಸುವ ಸ್ಪರ್ಧೆ ಆಯೋಜಿಸಲಾಗಿತ್ತು.

5ರಿಂದ 7ನೇ ತರಗತಿ ವಿಭಾಗದಲ್ಲಿ ಸಿದ್ದಾಪುರದ ಸಂತ ಅನ್ನಮ್ಮ ಶಾಲೆಯ ನಿಬಿನ್ (ಪ್ರಥಮ), ಮಡಿಕೇರಿ ಸಂತ ಜೋಸೆಫರ ಶಾಲೆಯ ಆರ್. ಸಾತ್ವಿಕ್ ಅನ್ವೇಕರ್ (ದ್ವಿತೀಯ) ಬಹುಮಾನ ಪಡೆದರು. 8ರಿಂದ 10ನೇ ತರಗತಿ ವಿಭಾಗದಲ್ಲಿ ವೀರಾಜಪೇಟೆಯ ಸಂತ ಅನ್ನಮ್ಮ ಪ್ರೌಢಶಾಲೆಯ ಅಲೋಸಿಯ ಲೋನಾ (ಪ್ರಥಮ), ಅದೇ ಶಾಲೆಯ ಲಿಯೇರಿನ ಬಿ.ಪಿ. (ದ್ವಿತೀಯ), ಅದೇ ಶಾಲೆಯ ಕ್ಲೈನ್‍ಶಾನ್ ಡಿಮೆಲ್ಲೋ (ತೃತೀಯ) ಸ್ಥಾನ ಪಡೆದರು.

ಪಿ.ಯು.ಸಿ. ತರಗತಿ ವಿಭಾಗದಲ್ಲಿ ಮಡಿಕೇರಿಯ ಸಂತ ಜೋಸೆಫರ ಪ.ಪೂ. ಕಾಲೇಜಿನ ಬಿ.ಆರ್. ಲಿಖಿತಾ ಶೆಟ್ಟಿ (ಪ್ರಥಮ), ಅದೇ ಕಾಲೇಜಿನ ಕೆ.ಎಸ್. ಪೂಜ (ದ್ವಿತೀಯ) ಹಾಗೂ ಅದೇ ಕಾಲೇಜಿನ ಜಿ.ಜಿ. ಕೃಪಾ (ತೃತೀಯ) ಸ್ಥಾನ ಪಡೆದರು.

ಸ್ಪರ್ಧೆಯನ್ನು ಹಿರಿಯ ಚಿತ್ರಕಲಾವಿದರಾದ ಬಿ.ಆರ್. ಸತೀಶ್ ನಡೆಸಿಕೊಟ್ಟರು. ಅವರ ಕಲ್ಪನೆ ದೇಶದ ಗಡಿ, ಭಾಷೆ, ಸಂಸ್ಕøತಿ ಮತ್ತು ಜನತೆಯನ್ನು ಮೀರಿದ್ದಾಗಿತ್ತು ಎಂದು ಸ್ಮರಿಸಿದರು.

ಠಾಕೂರ್ ಅವರು ಭಾರತದ ರಾಷ್ಟ್ರಗೀತೆಯನ್ನು ಮಾತ್ರ ರಚಿಸಿಲ್ಲ. ಬಾಂಗ್ಲಾ ದೇಶ ಮತ್ತು ಪಾಕಿಸ್ತಾನದ ರಾಷ್ಟ್ರಗೀತೆಯ ರಚನೆಯ ಕೀರ್ತಿಯೂ ವಿಶ್ವಕವಿಗೆ ಸಲ್ಲಬೇಕಿದೆ. ಅಲ್ಲದೆ, ಶ್ರೀಲಂಕಾ ದೇಶದ ರಾಷ್ಟ್ರಗೀತೆಗೆ ಹಾಗೂ ಸ್ವಾತಂತ್ರ್ಯ ಚಳುವಳಿ ಸಂದರ್ಭದಲ್ಲಿ ಹುಟ್ಟಿಕೊಂಡ ‘ವಂದೇ ಮಾತರಂ’ ಗೀತೆಗೂ ರಾಗ ಸಂಯೋಜನೆ ಮಾಡಿದ ಹೆಗ್ಗಳಿಕೆ ರವೀಂದ್ರನಾಥ್ ಠಾಕೂರ್ ಅವರಿಗೆ ಸೇರುತ್ತದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವೇದಿಕೆಯ ಸಂಚಾಲಕ ಬಿ.ಎ. ಶಂಶುದ್ದೀನ್ ಮಾತನಾಡಿ, ಬಂಗಾಳದ ಸಾಂಸÀ್ಕøತಿಕ ಸುಧಾರಕರಾಗಿ ವಿಶ್ವ ಮನ್ನಣೆ ಪಡೆದ ರವೀಂದ್ರನಾಥ್ ಠಾಕೂರ್ ಅವರು ಗಾಂಧೀಜಿಯವರಂತೆ ಭಾರತದ ಸಾರ್ವಕಾಲಿಕ ಸ್ವತ್ತಾಗಿದ್ದಾರೆ. ಠಾಕೂರ್ ಅವರ ಮಾನವೀಯ ಮೌಲ್ಯಗಳ ಚಿಂತನೆಗಳನ್ನು ಇಂದಿನ ಪೀಳಿಗೆಗೆ ಪರಿಚಯಿಸುವ ಹಿನ್ನೆಲೆಯಲ್ಲಿ ಅವರ ಜಯಂತಿಯನ್ನು ವೇದಿಕೆ ವತಿಯಿಂದ ಆಯೋಜಿಸಿರುವದಾಗಿ ತಿಳಿಸಿದರು.

ವೇದಿಕೆಯ ಸಂಚಾಲಕ ಡಾ. ಪಿ.ಆರ್. ದುರ್ಗಾ ಪ್ರಸಾದ್ ಸ್ವಾಗತಿಸಿದರು. ವೇದಿಕೆಯ ಪ್ರಮುಖರಾದ ಎಸ್.ಐ. ಮುನೀರ್ ಅಹಮದ್ ವಿಶ್ವ ಕವಿವಾಣಿ ವಾಚಿಸಿ ಕಾರ್ಯಕ್ರಮ ನಿರೂಪಿಸಿದರು. ಎಂ.ಪಿ. ಕೇಶವ ಕಾಮತ್ ಅವರು ವಂದಿಸಿದರು. ಹಿರಿಯರಾದ ಟಿ.ಪಿ. ರಮೇಶ್, ಹಿರಿಯ ವಕೀಲ ಕೆ.ಆರ್. ವಿದ್ಯಾಧರ್, ಕೆ.ಪಿ. ಬಾಲಸುಬ್ರಮಣ್ಯಂ ಸೇರಿದಂತೆ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

- ವರದಿ: ರಫೀಕ್ ತೂಚಮಕೇರಿ.