ಮಡಿಕೇರಿ, ಜೂ. 9: ಕೋವಿ ಹಕ್ಕು ವಿನಾಯಿತಿ ಕುರಿತಾಗಿ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ನಿವೃತ್ತ ಕ್ಯಾ. ಯಾಲದಾಳು ಕೆ. ಚೇತನ್ ಸಲ್ಲಿಸಿರುವ ಅರ್ಜಿ ಕುರಿತಾಗಿ ಬೆಂಗಳೂರು ಕೊಡವ ಸಮಾಜದಿಂದ ಸಲ್ಲಿಸಲಾಗಿ ರುವ ಇಂಪ್ಲೀಡಿಂಟ್ ಅರ್ಜಿಯ ವಿಚಾರಣೆ ತಾ. 11 ರಂದು (ನಾಳೆ) ನಡೆಯಲಿದೆ. ಕೋರ್ಟ್ ನಂಬರ್ 1ರಲ್ಲಿ ಈ ಅರ್ಜಿ ವಿಚಾರಣೆಗೆ ಬರಲಿದೆ ಎಂದು ಸಮಾಜದ ಪರ ವಕೀಲ ದೇವಯ್ಯ ಅವರು ತಿಳಿಸಿದ್ದಾರೆ.