ಮಡಿಕೇರಿ, ಜೂ. 9: ಸರ್ಕಾರಿ ಪ್ರೌಢಶಾಲಾ ಸಹ ಶಿಕ್ಷಕರ ಜೇಷ್ಠತಾ ಪಟ್ಟಿಯನ್ನು ಆಯ್ಕೆ ಪಟ್ಟಿಯಲ್ಲಿರುವ ಮೆರಿಟ್ ಸಂಖ್ಯೆಯನ್ನು ಪರಿಗಣಿಸಿ ಇಲಾಖಾ ವೆಬ್‍ಸೈಟ್‍ನಲ್ಲಿ ಜೇಷ್ಠತಾ ಪಟ್ಟಿಯನ್ನು ಪ್ರಕಟಿಸಿದ ಆಕ್ಷೇಪಣೆಯನ್ನು ಆಹ್ವಾನಿಸಲಾಗಿದೆ.
ಪ್ರಕಟಿಸಿದ ಪಟ್ಟಿಯಲ್ಲಿ ಶಿಕ್ಷಕರ ಜನ್ಮ ದಿನಾಂಕ ಮತ್ತು ಸೇವೆಗೆ ಸೇರಿದ ದಿನಾಂಕ, ಬಡ್ತಿ ಹೊಂದಿದ ಶಿಕ್ಷಕರು ಮಾಹಿತಿ, ನೈಜ ಮೆರಿಟ್ ಪಟ್ಟಿಯಲ್ಲಿ ಅಭ್ಯರ್ಥಿಗೆ ಜೇಷ್ಠತೆಯಲ್ಲಿ ಸೂಕ್ತ ಸ್ಥಾನ ಲಭ್ಯವಿಲ್ಲದಿರುವದು, ಉಪನ್ಯಾಸಕರಾಗಿ ಮತ್ತು ಮುಖ್ಯ ಶಿಕ್ಷಕರಾಗಿ ಬಡ್ತಿ ಹೊಂದಿದವರ ಹೆಸರನ್ನು ಕೈಬಿಟ್ಟಿದಲ್ಲಿ ಕೂಡಲೇ ಪೂರಕ ಮಾಹಿತಿಗಳೊಂದಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ಖುದ್ದಾಗಿ ತಾ. 30 ರೊಳಗೆ ಸಲ್ಲಿಸಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕಿ ಮಂಜುಳಾ ತಿಳಿಸಿದ್ದಾರೆ.