ಸಿದ್ದಾಪುರ, ಜೂ. 8: ನೆಲ್ಲಿಹುದಿಕೇರಿಯ ಶ್ರೀ ಮುತ್ತಪ್ಪ ಯುವಜನ ಕಲಾ ವೇದಿಕೆ ವತಿಯಿಂದ ನೆಲ್ಲಿಹುದಿಕೇರಿಯ ಎಂ.ಜಿ. ಕಾಲೋನಿಗೆ ತೆರಳುವ ತಿರುವಿನಲ್ಲಿ ನೂತನ ಬಸ್ ತಂಗುದಾಣ ನಿರ್ಮಿಸಿದ್ದು, ಗ್ರಾಮಸ್ಥರ ಪ್ರಶಂಸೆಗೆ ಪಾತ್ರವಾಗಿದೆ.
ನೆಲ್ಲಿಹುದಿಕೇರಿ ಮುಖ್ಯ ರಸ್ತೆಯ ಎಂ.ಜಿ. ಕಾಲೋನಿಗೆ ತೆರಳುವ ತಿರುವಿನಲ್ಲಿ ಕಸದ ರಾಶಿ ಸುರಿಯಲಾಗುತ್ತಿದ್ದು, ಇದನ್ನರಿತ ನೆಲ್ಲಿಹುದಿಕೇರಿಯ ಶ್ರೀ ಮುತ್ತಪ್ಪ ಯುವಜನ ಕಲಾ ವೇದಿಕೆಯ ಕಾರ್ಯಕರ್ತರು ಕಸವನ್ನು ತೆರವುಗೊಳಿಸಿ, ಕಸವಿದ್ದ ಜಾಗದಲ್ಲಿ ಗ್ರಾಮಸ್ಥರಿಗೆ ನೆರವಾಗುವ ನಿಟ್ಟಿನಲ್ಲಿ ನೂತನ ಬಸ್ ತಂಗುದಾಣವನ್ನು ನಿರ್ಮಿಸಿದ್ದಾರೆ.
ನೂತನ ಬಸ್ ತಂಗುದಾಣ ಉದ್ಘಾಟನಾ ಕಾರ್ಯಕ್ರಮದಲ್ಲಿ ಗ್ರಾ.ಪಂ ಸದಸ್ಯ ಅಫ್ಸಲ್, ಪಿಡಿಓಗಳಾದ ಅಬ್ದುಲ್ಲ, ರಾಜನ್, ಶ್ರೀ ಮುತ್ತಪ್ಪ ಯುವಜನ ಕಲಾ ವೇದಿಕೆಯ ಚರಣ್, ಪದ್ಮನಾಭ, ಅನೀಶ್ ಸೇರಿದಂತೆ ಸದಸ್ಯರು, ಗ್ರಾಮಸ್ಥರು ಇದ್ದರು.