ಮಡಿಕೇರಿ, ಜೂ. 4 : ಸೌಹಾರ್ದ ಕೊಡಗು ವೇದಿಕೆಯಿಂದ ತಾ. 9 ರಂದು ವಿಶ್ವ ಕವಿ ರವೀಂದ್ರನಾಥ್‍ಠಾಕೂರ್ ಅವರ ಜಯಂತಿ ಆಚರಣೆ ಮಾಡಲಾಗುತ್ತದೆ. ಅಂದು ಬೆಳಿಗ್ಗೆ 10 ಗಂಟೆಗೆ ಬಾಲಭವನದಲ್ಲಿ ಕಾರ್ಯಕ್ರಮ ನಡೆಯಲಿದ್ದು, 11 ಗಂಟೆವರೆಗೆ ವಿದ್ಯಾರ್ಥಿಗಳು ರವೀಂದ್ರನಾಥ್‍ಠಾಕೂರರ ಚಿತ್ರ ಬಿಡಿಸುವ ಸ್ಪರ್ಧೆ, 11 ಗಂಟೆಯಿಂದ ಉಪನ್ಯಾಸ ನಡೆಯಲಿದೆ.

ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ಆಂಗ್ಲ ಪ್ರಾಧ್ಯಾಪಕ ಎಚ್. ಪಟ್ಟಾಭಿರಾಮ ಸೋಮಯಾಣಿ ಉಪನ್ಯಾಸ ನೀಡುವರು. ವೇದಿಕೆಯ ಸಂಚಾಲಕ ಬಿ. ಎ. ಷಂಶುದ್ದೀನ್ ಅಧ್ಯಕ್ಷತೆ ವಹಿಸುವರು.