ಮಡಿಕೇರಿ, ಜೂ. 4: ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ರಾಜ್ಯ ಸಾರಿಗೆ ಬಸ್ಸೊಂದಕ್ಕೆ ಮೈಸೂರಿನಿಂದ ಮಂಗಳೂರಿನತ್ತ ತೆರಳುತ್ತಿದ್ದ ಡಿಸೇಲ್ ಟ್ಯಾಂಕರ್‍ವೊಂದು ಡಿಕ್ಕಿ ಹೊಡೆದ ಘಟನೆ ಕೊಯನಾಡು ಬಳಿ ನಿನ್ನೆ ರಾತ್ರಿ ಸಂಭವಿಸಿದೆ. 7.30ರ ಸಂಜೆಗತ್ತಲೆ (ಮೊದಲ ಪುಟದಿಂದ) ನಡುವೆ ಟ್ಯಾಂಕರ್ (ಕೆಎ 19 ಎಬಿ 6717) ಚಾಲಕ ಮದನ್ ಎಂಬಾತನ ಅಜಾಗರೂಕತೆಯಿಂದ ಬಸ್‍ಗೆ ಡಿಕ್ಕಿಯಾಗಿದೆ.ಈ ವೇಳೆ ಬಸ್‍ನ (ಕೆಎ 21 ಎಫ್ 0124) ಚಾಲಕ ಜಗದೀಶ್ ಸಮಯ ಪ್ರಜ್ಞೆಯೊಂದಿಗೆ ಯಾವದೇ ಪ್ರಾಣಾಪಾಯ ಸಂಭವಿಸದಂತೆ, ಬಸ್‍ನಲ್ಲಿದ್ದ ಪ್ರಯಾಣಿಕರ ರಕ್ಷಣೆ ಮಾಡಿದ್ದು, ಚಾಕಚಕ್ಯತೆ ಮೆರೆದಿದ್ದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಘಟನೆ ಸಂಬಂಧ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಜರುಗಿಸಿದ್ದಾರೆ.