ಮಡಿಕೇರಿ, ಜೂ. 4: ಶನಿವಾರಸಂತೆ 66/11ಕೆವಿ ವಿದ್ಯುತ್ ಉಪ-ಕೇಂದ್ರದಿಂದ ಹೊರಹೋಗುವ ಎಫ್-3 ಶನಿವಾರಸಂತೆ ಫೀಡರ್‍ನಲ್ಲಿ ತುರ್ತು ನಿರ್ವಹಣೆ ಮತ್ತು ವಿದ್ಯುತ್ ಮಾರ್ಗಗಳ ಕಾರ್ಯವನ್ನು ನಿರ್ವಹಿಸಬೇಕಾಗು ವದರಿಂದ ತಾ. 5 ರಂದು (ಇಂದು) ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಎಫ್-3 ಶನಿವಾರಸಂತೆ ಫೀಡರ್‍ನಲ್ಲಿ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗುವದು. ಆದ್ದರಿಂದ, ಶನಿವಾರಸಂತೆ ಪಟ್ಟಣ, ಹೆಮ್ಮನೆ, ಬಿದರೂರು, ಗುಡುಗಳಲೆ, ಚಿಕ್ಕಕೊಳತ್ತೂರು ಸುತ್ತಮುತ್ತ ವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.