ಮಡಿಕೇರಿ, ಜೂ. 4: ನಗರಸಭೆಗೆ ಒಳಪಡುವ ಜಿ.ಟಿ. ರಸ್ತೆ ಶಾಲೆಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ, ಕೊಡಗು ಘಟಕದ ವತಿಯಿಂದ ತಾ. 5 ರಂದು (ಇಂದು) 3 ಗಂಟೆಗೆ ಬಡ ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ವಿತರಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಶಕ್ತಿ ಪತ್ರಿಕೆಯ ಪ್ರಧಾನ ಸಂಪಾದಕ ಜಿ. ರಾಜೇಂದ್ರ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಸರಕಾರಿ ಉಪಮುಖ್ಯ ವೈದ್ಯಾಧಿಕಾರಿ ಹೆಚ್.ವಿ. ದೇವದಾಸ್ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಸಮಾಜ ಸೇವಕರಾದ ಟಿ.ಆರ್. ವಾಸುದೇವ್, ಪ್ರಥಮ ದರ್ಜೆ ಗುತ್ತಿಗೆದಾರ ಬಿ.ಬಿ. ಐತ್ತಪ್ಪ ರೈ, ನಗರಸಭಾ ಮಾಜಿ ಸದಸ್ಯ ಕೆ.ಯು. ಅಶ್ರಫ್ ಭಾಗವಹಿಸಲಿದ್ದಾರೆ.