ಮಡಿಕೇರಿ, ಜೂ. 4: ಗ್ರಾಮೀಣ ಅಂಚೆ ನೌಕರರು ಮೇ 22 ರಿಂದ ಅನಿರ್ದಿಷ್ಟಾವಧಿ ಮುಷ್ಕರದಲ್ಲಿ ಪಾಲ್ಗೊಂಡಿರುವದರಿಂದ ಅಂಚೆ ಸೇವೆಗಳಲ್ಲಿ ತೊಂದರೆ ಉಂಟಾಗಿದ್ದು, ಸಾರ್ವಜನಿಕರು ಈ ಅವಧಿಯಲ್ಲಿ ಬಂದಿರಬಹುದಾದ, ಬರಬಹುದಾದ ಕಾಗದ ಪತ್ರಗಳನ್ನು ತಾವೇ ಖುದ್ದಾಗಿ ಇಲಾಖಾ ಅಂಚೆ ಕಚೇರಿಗೆ ಭೇಟಿ ನೀಡಿ ಅಂಚೆ ಪಾಲಕರಲ್ಲಿ ವಿಚಾರಿಸಿ ಪಡೆದುಕೊಳ್ಳುವಂತೆ ಅಂಚೆ ಅಧೀಕ್ಷಕರು ಕೋರಿದ್ದಾರೆ.