ಮಡಿಕೇರಿ, ಜೂ. 4: ಕಡಿಯತ್ತೂರು ಗ್ರಾಮದ ಬಾಡನ ನಂದಕುಮಾರ್ ಎಂಬವರ ಮನೆಯ ಮೇಲೆ ಗಾಳಿ ಮಳೆಯ ನಡುವೆ ಬೈನೆ ಮರವೊಂದು ಬುಡಮೇಲಾಗಿ ಬಿದ್ದು ಮೇಲ್ಚಾವಣಿ ಹಾನಿಗೊಂಡಿದೆ. ಈ ವೇಳೆ ಸಂಭವಿಸಿರುವ ನಷ್ಟದ ಬಗ್ಗೆ ಸೂಕ್ತ ಪರಿಹಾರ ಕೋರಿ ಕಂದಾಯ ಇಲಾಖೆ ಹಾಗೂ ಬೆಟ್ಟಗೇರಿ ಗ್ರಾ.ಪಂ.ಗೆ ಅವರು ದೂರು ಸಲ್ಲಿಸಿದ್ದಾರೆ.