ಮಡಿಕೇರಿ, ಜೂ. 5: ತಾ. 15 ರಂದು ಮಡಿಕೇರಿಯ ಭಾರತೀಯ ವಿದ್ಯಾಭವನದಲ್ಲಿ (ಓಂಕಾರೇಶ್ವರ ದೇವಸ್ಥಾನದ ಮುಖ್ಯದ್ವಾರದ ಸಮೀಪ) ಬೆಳಿಗ್ಗೆ 9 ರಿಂದ ಹತ್ತನೇ ವರ್ಷದ ಪೂವಮ್ಮ-ಐಯ್ಯಪ್ಪ ಸ್ಮಾರಕ ಸಂಗೀತ ಸ್ಪರ್ಧೆ-2018 ನಡೆಸಲಾಗುವದು. ಈ ವರ್ಷದ ಹಾಡಿನ ಸ್ಪರ್ಧೆಯಲ್ಲಿ ದಾಸರ ಪದಗಳು. ಕಿರಿಯರಿಗೆ ಪುರಂದರದಾಸರ ಹಾಡುಗಳು. ಹಿರಿಯರಿಗೆ ಕನಕದಾಸರ ಹಾಡುಗಳು. ಕಿರಿಯರು 12 ವರ್ಷ ಪ್ರಾಯದವರೆಗೆ, ಹಿರಿಯರು 13-21 ವರ್ಷ ಪ್ರಾಯದವರೆಗೆ. ಹಾಡುಗಳು ಶುೃತಿ ಹಾಗೂ ತಾಳಬದ್ಧವಾಗಿರತಕ್ಕದ್ದು. ಹಾಡುಗಳು ಅಪರೂಪದ್ದಾಗಿದ್ದರೆ ಉತ್ತಮ. ಸ್ಪರ್ಧಿಗಳು ಶಾಲಾ-ಕಾಲೇಜುಗಳಿಂದ ವಯಸ್ಸಿನ ದೃಢೀಕರಣ ಪತ್ರಗಳನ್ನು ತರತಕ್ಕದ್ದು. ಹಾಡಿಗೆ ಸಮಯ ಮಿತಿ (3+1) ನಿಮಿಷ ಮಾತ್ರ. ಜಿಲ್ಲೆಯೊಳಗಿನಿಂದ ಬರುವ ಸ್ಪರ್ಧಾಳುಗಳ ಬಸ್ ಶುಲ್ಕ ನೀಡಲಾಗುತ್ತದೆ ಹಾಗೂ ಸರ್ವರಿಗೂ ಊಟದ ವ್ಯವಸ್ಥೆ ಮಾಡಲಾಗುತ್ತದೆ.

ಒಂದೇ ಶಾಲೆಯ ಸ್ಪರ್ಧಿಗಳು ಬೇರೆ ಬೇರೆ ಹಾಡುಗಳನ್ನು ಹಾಡಬೇಕಿದೆ. ಹೆಚ್ಚಿನ ಮಾಹಿತಿಗೆ ಮೊ. 9480557100, 9448366715, 9480653098 ಸಂಪರ್ಕಿಸಬಹುದು ಎಂದು ಅಧ್ಯಕ್ಷೆ ಸೌಭಾಗ್ಯ ಪೊನ್ನಪ್ಪ ತಿಳಿಸಿದ್ದಾರೆ.