ಕುಶಾಲನಗರ, ಜೂ. 5: ಕುಶಾಲನಗರ ಸಂಚಾರಿ ಪೊಲೀಸ್ ಠಾಣೆಯ ಆಶ್ರಯದಲ್ಲಿ ಕುಶಾಲನಗರದ ಫಾತಿಮಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ, ಪ್ರೌಢಶಾಲಾ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ರಸ್ತೆ ಸಂಚಾರ ನಿಯಮದ ಬಗ್ಗೆ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಸಂಚಾರಿ ಪೊಲೀಸ್ ಠಾಣೆಯ ಠಾಣಾಧಿಕಾರಿ ನವೀನ್‍ಗೌಡ ಈ ಸಂದರ್ಭ ಮಾತನಾಡಿ, ಮಕ್ಕಳಲ್ಲಿ ಸಂಚಾರಿ ನಿಯಮದ ಬಗ್ಗೆ ಅರಿವು ಇರಬೇಕು. ವಿದ್ಯಾರ್ಥಿಗಳು ವಾಹನ ದಾಖಲೆ, ಚಾಲನಾ ಪರವಾನಗಿ ಹೊಂದಿದ್ದಲ್ಲಿ ಮಾತ್ರ ತಮ್ಮ ವಾಹನ ಚಾಲನೆ ಮಾಡಬೇಕು. ಸಂಚಾರಿ ಸೂಚನಾ ಫಲಕಗಳ ನಿಯಮಗಳನ್ನು ಪಾಲಿಸುವದು ಮತ್ತು ಇದರ ಜೊತೆಯಲ್ಲಿ ಸಂಚಾರಿ ನಿಯಮವನ್ನು ಕಾನೂನಾತ್ಮಕವಾಗಿ ತಿಳಿದುಕೊಳ್ಳುವದರ ಮೂಲಕ ಸಮರ್ಪಕ ಸಂಚಾರಿ ವ್ಯವಸ್ಥೆಗೆ ಕೈಜೋಡಿಸಬೇಕು ಎಂದರು.