ಸೋಮವಾರಪೇಟೆ, ಜೂ.3: ಹಿಂದೂ ದೇವತೆಗಳು ಹಾಗೂ ಹಿಂದೂ ನೇತಾರರನ್ನು ಚಲನಚಿತ್ರ ಹಾಗೂ ಧಾರವಾಹಿಗಳಲ್ಲಿ ಅಪಮಾನ ಮಾಡುತ್ತಿರುವ ಸನ್ನಿವೇಶಗಳನ್ನು ತಡೆಗಟ್ಟಲು ಮಸೂದೆ ಜಾರಿಗೆ ತರಬೇಕೆಂದು ಹಿಂದೂ ಜನಜಾಗೃತಿ ಸಮಿತಿ ಆಗ್ರಹಿಸಿದ್ದು, ಪ್ರಧಾನಿ ಮತ್ತು ಗೃಹ ಸಚಿವರಿಗೆ ಇಲ್ಲಿನ ತಹಶೀಲ್ದಾರ್ ಮೂಲಕ ಮನವಿ ಸಲ್ಲಿಸಿತು.
ಈ ಸಂದರ್ಭ ಸಮಿತಿಯ ಪದಾಧಿಕಾರಿಗಳಾದ ಪಿ. ಮಧು, ಕಿಬ್ಬೆಟ್ಟ ಆನಂದ್, ದೀಪಕ್, ಎಸ್.ಎಲ್ ಸೀತಾರಾಮ್, ಮಸಗೋಡು ಲೋಕೇಶ್, ಲಕ್ಷ್ಮೀಕಾಂತ, ಸೋಮೇಶ್, ರತ್ನಕುಮಾರ್, ಅಭಿಷೇಕ್, ಚರಣ್ ಸೇರಿದಂತೆ ಇತರರು ಉಪಸ್ಥಿತರಿದ್ದರು.