ಮಡಿಕೇರಿ, ಜೂ. 3: ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಇವರು ಕರ್ನಾಟಕ ರಾಜ್ಯದಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಕ್ಕೆ ಸೇರಿದ ವ್ಯಕ್ತಿಗಳ ಸಮಸ್ಯೆ ಮತ್ತು ಕುಂದುಕೊರತೆಗಳ ಬಗ್ಗೆ ಜು. 26 ಮತ್ತು 27 ರಂದು ಬೆಂಗಳೂರು ನಗರದಲ್ಲಿ ಕುಂದುಕೊರತೆ ನಿವಾರಣೆ ಸಭೆ ನಡೆಸಲಾಗುವದು.

ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಕ್ಕೆ ಸೇರಿದ ವ್ಯಕ್ತಿಗಳ ಮೇಲೆ ಸರ್ಕಾರಿ ನೌಕರರು ದೌರ್ಜನ್ಯವೆಸಗಿದ ಬಗ್ಗೆ ಹಾಗೂ ಸರ್ಕಾರಿ ನೌಕರರ ನಿರ್ಲಕ್ಷದಿಂದ ದೌರ್ಜನ್ಯಕ್ಕೊಳಗಾದ ಬಗ್ಗೆ ದೂರುಗಳನ್ನು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ, ಮಾನವ ಅಧಿಕಾರ ಭವನ, ಬ್ಲಾಕ್-ಸಿ, ಜಿಪಿಓ ಕಾಂಪ್ಲೆಕ್ಸ್, ಐಎನ್‍ಎ, ನವದೆಹಲಿ-110023 ನೋಂದಾಯಿತ ಅಂಚೆ ಮೂಲಕ ತಾ. 10 ರೊಳಗೆ ಸಲ್ಲಿಸಬೇಕು ಅಥವಾ ಇ-ಮೇಲ್ ವಿಳಾಸ ರಿಡಿಟಚಿತಿಟಿhಡಿಛಿ@ಟಿiಛಿ.iಟಿ ಅಥವಾ ಫ್ಯಾಕ್ಸ್ ನಂ:011-24651334 ಮೂಲಕ ಸಲ್ಲಿಸಬಹುದಾಗಿದೆ. ರಿಜಿಸ್ಟ್ರಾರ್, ರಾಷ್ಟ್ರೀಯ ಮಾನವ ಹಕ್ಕು ಆಯೋಗ, ಮಾನವ ಅಧಿಕಾರಿ ಭವನ, ಸಿ-ಬ್ಲಾಕ್,, ಜಿಪಿಒ ಕಟ್ಟಡ, ಐಎನ್‍ಎ ನವದೆಹಲಿ 110023 ಸಂಪರ್ಕಿಸಬಹುದಾಗಿದೆ.