ಬೆಂಗಳೂರು, ಜೂ. 1: ಪಿಯುಸಿ ನಂತರ ವಿವಿಧ ವೃತ್ತಿಪರ ಕೋರ್ಸ್‍ಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ಸಿಇಟಿ ಫಲಿತಾಂಶ ಪ್ರಕಟಗೊಂಡಿದೆ. ಇಂಜಿನಿಯರಿಂಗ್‍ನಲ್ಲಿ ವಿಜಯಪುರ ಜಿಲ್ಲೆಯ ಸಿದ್ಧಾರ್ಥ ದೊಡ್ಡಮನಿ ರಾಜ್ಯಕ್ಕೆ ಪ್ರಥಮ ಸ್ಥಾನಗಳಿಸಿದರೆ ದಕ್ಷಿಣ ಕನ್ನಡ ಜಿಲ್ಲೆಯ ನಾರಾಯಣ್ ಪೈ ದ್ವಿತೀಯ ಸ್ಥಾನಗಳಿಸಿದ್ದಾರೆ. ಬೆಂಗಳೂರಿನ ಮಹಿಮಾ ಕೃಷ್ಣ ತೃತೀಯ ಹಾಗೂ ಬಳ್ಳಾರಿಯ ಎಸ್.ಆರ್. ಅಪರೂಪ ನಾಲ್ಕನೇ ರ್ಯಾಂಕ್ ಗಳಿಸಿದ್ದಾರೆ. ತುಹಿನ್ ಗಿರಿನಾಥ್ ಬೆಂಗಳೂರಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಇಂಜಿನಿಯರಿಂಗ್‍ನಲ್ಲಿ ವಿಜಯಪುರದ ಶ್ರೀಧರ ದೊಡ್ಮನಿ ಪ್ರಥಮ ಸ್ಥಾನ ಪಡೆದಿದ್ದು, ದಕ್ಷಿಣ ಕನ್ನಡದ ನಾರಾಯಣ ಪೈ ದ್ವಿತೀಯ ಸ್ಥಾನ ಪಡೆದಿದ್ದಾರೆ. ಡಿಬೋರ್ಸ್ ಸನ್ಯಾಸಿ 3 ನೇ ಸ್ಥಾನ ಪಡೆದಿದ್ದಾರೆ. ಬೆಂಗಳೂರಿನ ಹುಡುಗಿ ಅನೀತಾ ಜೇಮ್ಸ್ ಬೆಂಗಳೂರಿಗೆ ಹೆಣ್ಣುಮಕ್ಕಳಲ್ಲಿ ಪ್ರಥಮ ಸ್ಥಾನ ಹಾಗೂ ಎಂಜಿನಿಯರಿಂಗ್ ನಲ್ಲಿ ರಾಜ್ಯಕ್ಕೆ 5ನೇ ರ್ಯಾಂಕ್ ಗಳಿಸಿದ್ದಾರೆ. ಪಶುವೈದ್ಯ ವಿಭಾಗದಲ್ಲಿ ವಿನೀತ್ ಮೆಗುರು ಪ್ರಥಮ ರ್ಯಾಂಕ್ ಪಡೆದಿದ್ದಾರೆ. ತಾ. 25 ರಿಂದ ಮೊದಲ ಹಂತದ ಕೌನ್ಸೆಲಿಂಗ್ ಪ್ರಕ್ರಿಯೆ ಆರಂಭವಾಗಲಿದೆ. ಆಗಸ್ಟ್ 18ಕ್ಕೆ ಕೊನೆಯ ಹಂತದ ಕೌನ್ಸೆಲಿಂಗ್ ಪ್ರಕ್ರಿಯೆ ನಡೆಯಲಿದೆ.

ತಾ. 1 ರಿಂದ ಪಿ. ಚಿದಂಬರಂ ವಿಚಾರಣೆ

ನವದೆಹಲಿ, ಜೂ. 1: ಐಎನ್‍ಎಕ್ಸ್ ಮೀಡಿಯಾ ಭ್ರಷ್ಟಾಚಾರ ಪ್ರಕರಣ ಸಂಬಂಧ ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಅವರನ್ನು ತಾ. 6 ರಂದು ಕೇಂದ್ರೀಯ ತನಿಖಾ ದಳ ವಿಚಾರಣೆ ನಡೆಸಲಿದೆ. ಗುರುವಾರವಷ್ಟೇ ಈ ಪ್ರಕರಣದ ವಿಚಾರಣೆ ನಡೆಸಿದ್ದ ದೆಹಲಿ ಹೈಕೋರ್ಟ್ ಜುಲೈ 3 ರವರೆಗೆ ಚಿದಂಬರಂ ಅವರನ್ನು ಬಂಧಿಸದಂತೆ ಮಧ್ಯಂತರ ರಕ್ಷಣೆ ನೀಡಿತ್ತು. ಏರ್ಸೆಲ್-ಮ್ಯಾಕ್ಸಿಸ್ ರೂ. 3,500 ಕೋಟಿ ಮತ್ತು ಐಎನ್‍ಎಕ್ಸ್ ಮೀಡಿಯಾ ಪ್ರಕರಣದಲ್ಲಿ 305 ಕೋಟಿ ರೂ.ಗಳ ಅಕ್ರಮ ವ್ಯವಹಾರದಲ್ಲಿ ಚಿದಂಬರಂ ಕೈವಾಡ ಕಂಡುಬಂದಿದೆ ಎಂದು ತನಿಕಾ ದಳಗಳು ಹೇಳಿದೆ. ಯುಪಿಎ-1 ಅವಧಿಯಲ್ಲಿ ಹಣಕಾಸು ಸಚಿವರಾಗಿದ್ದ ಚಿದಂಬರಂ ಈ ಎರಡೂ ಸಂಸ್ಥೆಗಳಿಗೆ ಅನುಕೂಲವಾಗುವಂತೆ ವಿದೇಶೀ ಹೂಡಿಕೆ ಪ್ರಚಾರ ಮಂಡಳಿಗೆ ಅನುಮತಿ ನೀಡಿದ್ದರು. ಐಎನ್‍ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಸಿಬಿಐ ಕಳೆದ ವರ್ಷ ಮೇ 15 ರಂದು ಸಿಬಿಐ ಎಫ್‍ಐಆರ್ ದಾಖಲಿಸಿತ್ತು. ಇದೇ ಪ್ರಕರಣದಲ್ಲಿ ರೂ. 10 ಲಕ್ಷ ಪಡೆದ ಆರೋಪಕ್ಕೆ ಸಂಬಂಧಿಸಿ ಚಿದಂಬರಂ ಅವರ ಪುತ್ರ ಕಾರ್ತಿ ಚಿದಂಬರಂ ಅವರನ್ನು ಬಂಧಿಸಲಾಗಿತ್ತು.

ನಾರಾಯಣ ಮೂರ್ತಿ ಭೇಟಿಯಾದ ಸಿಎಂ

ಬೆಂಗಳೂರು, ಜೂ. 1: ಬೆಂಗಳೂರು ನಗರದ ಅಭಿವೃದ್ಧಿ ಹಾಗೂ ತ್ಯಾಜ್ಯ ನಿರ್ವಹಣೆ ಸಂಬಂಧ ಇಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಇನ್ಫೋಸಿಸ್ ಸ್ಥಾಪಕ ಎನ್.ಆರ್. ನಾರಾಯಣ ಮೂರ್ತಿ ಅವರೊಡನೆ ಚರ್ಚಿಸಿದ್ದಾರೆ. ಶುಕ್ರವಾರ ಬೆಳಿಗ್ಗೆ ಜಯನಗರದ ನಾರಾಯಣಮೂರ್ತಿ ಅವರ ನಿವಾಸದಲ್ಲಿ ಅವರನ್ನು ಭೇಟಿಯಾದ ಮುಖ್ಯಮಂತ್ರಿ ಬೆಂಗಳೂರಿನ ಬೆಳವಣಿಗೆ ಸೇರಿ ವಿವಿಧ ವಿಚಾರದ ಕುರಿತಂತೆ ಮಾತುಕತೆ ನಡೆಸಿದ್ದಾರೆ. ಬೆಂಗಳೂರಿನ ಮೂಲ ಸೌಕರ್ಯ ಅಭಿವೃದ್ಧಿ, ತ್ಯಾಜ್ಯ ನಿರ್ವಹಣೆ ಹಾಗೂ ಇನ್ನಿತರ ಮಹತ್ವದ ವಿಚಾರದಲ್ಲಿ ಸಮಿತಿ ರಚಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಈ ಸಂಬಂಧ ಸಲಹೆ ನಿಡುವಂತೆ ಮುಖ್ಯಮಂತ್ರಿ ಕುಮಾರಸ್ವಾಮಿ ಇನ್ಫೋಸಿಸ್ ನಾರಾಯಣಮೂರ್ತಿ ಅವರನ್ನು ಕೇಳಿದ್ದಾರೆ. ಮುಖ್ಯಮಂತ್ರಿಗಳ ನೇತೃತ್ವದಲ್ಲಿ ರಚನೆಯಾಗುವ ಈ ಸಮಿತಿ ಎರಡು ತಿಂಗಳಿಗೊಮ್ಮೆ ಸಭೆ ಸೇರಲಿದ್ದು ಪ್ರಗತಿ ಪರಿಶೀಲನೆ ಮಾಡಲಿದೆ. ನಾರಾಯಣಮೂರ್ತಿ ಮಾತನಾಡಿ ನೀವು ಸದಾ ಜನಪರ ಕಾಳಜಿ ಇರಿಸಿಕೊಳ್ಳುತ್ತೀರಿ, ನಿರಂತರ ಕೆಲಸ ಮಾಡುತ್ತೀರಿ ಎಂದು ಕುಮಾರಸ್ವಾಮಿ ಕಾರ್ಯವೈಖರಿಯನ್ನು ಹೊಗಳಿದ್ದಾರೆ.

ತೆರಿಗೆ ಪುರಸ್ಕಾರ ಯೋಜನೆಗೆ ತಿದ್ದುಪಡಿ

ನವದೆಹಲಿ, ಜೂ. 1: ಬೇನಾಮಿ ಆಸ್ತಿ, ವ್ಯವಹಾರದ ಬಗ್ಗೆ ಆದಾಯ ತೆರಿಗೆ ಇಲಾಖೆಗೆ ಸೂಕ್ತ ಮಾಹಿತಿ ನೀಡಿದ್ದರೆ, ಒಂದು ಕೋಟಿ ರೂಪಾಯಿ ಆದಾಯ ಗಳಿಸಬಹುದಾಗಿದೆ. ಅಲ್ಲದೇ ವಿದೇಶದಲ್ಲಿ ಬಚ್ಚಿಡಲಾಗಿರುವ ಕಪ್ಪುಹಣದ ಬಗ್ಗೆ ಮಾಹಿತಿ ನೀಡಿದ್ದರೆ, 5 ಕೋಟಿ ಆದಾಯ ಗಳಿಸಬಹುದಾಗಿದೆ. ಆದಾಯ ತೆರಿಗೆ ಕಾಯ್ದೆ 1961 ರ ಅಡಿಯಲ್ಲಿ ಭಾರತದಲ್ಲಿ ಆದಾಯ ಅಥವಾ ಆಸ್ತಿಗಳ ಮೇಲೆ ತೆರಿಗೆ ಗಣನೀಯವಾಗಿ ತಪ್ಪಿಸಿಕೊಳ್ಳುವುದು ತಡೆಯಲು ಮಾಹಿತಿ ನೀಡುವವರಿಗೆ 50 ಲಕ್ಷ ರೂಪಾಯಿ ಬಹುಮಾನ ನೀಡುವ ಆದಾಯ ತೆರಿಗೆ ಮಾಹಿತಿ ಪುರಸ್ಕಾರ ಯೋಜನೆಗೆ ತಿದ್ದುಪಡಿ ತರಲಾಗಿದೆ. ಬೇನಾಮಿ ವ್ಯವಹಾರ ಮಾಹಿತಿ ಪುರಸ್ಕಾರ ಯೋಜನೆ 2018ರ ಅಡಿಯಲ್ಲಿ ವಿದೇಶಿಗರು ಸೇರಿದಂತೆ ಯಾವದೇ ವ್ಯಕ್ತಿ, ಬೆನಾಮಿ ಆಸ್ತಿ, ವ್ಯವಹಾರದ ಬಗ್ಗೆ ಜಂಟಿ ಅಥವಾ ಹೆಚ್ಚುವರಿ ಆಯುಕ್ತರಿಗೆ ಮಾಹಿತಿ ನೀಡಬಹುದಾಗಿದೆ. ಬೇನಾಮಿ ಆಸ್ತಿ ವ್ಯವಹಾರದ ಬಗ್ಗೆ ಜನರು ಮಾಹಿತಿ ನೀಡುವದನ್ನು ಪೆÇ್ರೀತ್ಸಾಹಿಸುವದು ಪುರಸ್ಕಾರ ಯೋಜನೆಯ ಉದ್ದೇಶವಾಗಿದೆ. ಅಂತಹ ಆಸ್ತಿಗಳಿಂದ ಆದಾಯ ಗಳಿಸಬಹುದಾಗಿದೆ ಹೇಳಲಾಗಿದೆ.

ಪೊಲೀಸ್ ಪೇದೆ ಆತ್ಮಹತ್ಯೆಗೆ ಶರಣು

ಚಿಕ್ಕಮಗಳೂರು, ಜೂ. 1: ಪೆÇಲೀಸ್ ವಸತಿ ಗೃಹದಲ್ಲೇ ನೇಣು ಬಿಗಿದುಕೊಂಡು ಪೆÇಲೀಸ್ ಪೇದೆಯೊಬ್ಬ ಆತ್ಮಹತ್ಯೆಗೆ ಶರಣಾದ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. ಎರಡು ವಾರಗಳ ಹಿಂದಷ್ಟೇ ವಿವಾಹವಾಗಿದ್ದ ಪೆÇಲೀಸ್ ಪೇದೆ ಅನಿಲ್(30) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಯಾಗಿದ್ದು ಆತ್ಮಹತ್ಯೆಗೆ ಮುನ್ನ ಡೆತ್ ನೊಟ್ ಬರೆದಿಟ್ಟಿದ್ದಾರೆ. ಚಿಕ್ಕಮಗಳೂರು ಸಂಚಾರಿ ಪೆÇಲೀಸ್ ಠಾಣೆಯಲ್ಲಿ ಕರ್ತವ್ಯದಲ್ಲಿದ್ದ ಇವರು ರಾಮನ ಹಳ್ಳಿಯಲ್ಲಿರುವ ಪೆÇಲೀಸ್ ವಸತಿ ಗೃಹದಲ್ಲಿ ಸಾವಿಗೆ ಶರಣಾಗಿದಾರೆ. ಕೌತುಂಬಿಕ ಸಮಸ್ಯೆಯಿಂದಾಗಿ ಪೇದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಕೇಂದ್ರದ ವಿರುದ್ಧ ಪೇಜಾವರ ಶ್ರೀ ಅಸಮಾಧಾನ

ಉಡುಪಿ, ಜೂ. 1: ಕೇಂದ್ರದ ನರೇಂದ್ರ ಮೋದಿ ಸರ್ಕಾರದ ನಾಲ್ಕು ವರ್ಷದ ಆಡಳಿತ ನಮ್ಮ ನಿರೀಕ್ಷೆ ಮಟ್ಟವನ್ನು ಮುಟ್ಟಿಲ್ಲ. ಎಂದು ಉಡುಪಿ ಪೇಜಾವರ ಶ್ರೀ ವಿಶ್ವೇಶ್ವರತೀರ್ಥ ಶ್ರೀಪಾದರು ಹೇಳಿದ್ದಾರೆ. ಮೋದಿ ನಾಯಕತ್ವದ ಸರ್ಕಾರದ ಮೇಲೆ ಬಹಳ ನಿರೀಕ್ಷೆಗಳಿತ್ತು. ಆದರೆ ಅವರು ನಮ್ಮ ನಿರೀಕ್ಷೆ ಮಟ್ಟವನ್ನು ಮುಟ್ಟಲು ವಿಫಲರಾಗಿದ್ದಾರೆ ಶುಕ್ರವಾರ ಸುದ್ದಿಗರರೊಂದಿಗೆ ಪೇಜಾವರ ಶ್ರೀಗಳು ಮಾತನಾಡಿದ್ದಾರೆ. ದೇಶದ ಭ್ರಷ್ಟಾಚಾರ ನಿಯಂತ್ರಣಕ್ಕೆ ಬಂದಿದೆ ಆದರೆ ಕಪ್ಪುಹಣವನ್ನು ವಿದೇಶದಿಂದ ತರದೇ ಹೋಗಿರುವುದು, ಗಂಗಾ ಶುದ್ಧೀಕರಣ ಆಗದಿರುವದು ಸರ್ಕಾರದ ಹಿನ್ನೆಡೆಗೆ ಕಾರಣ ಅಧಿಕಾರಕ್ಕೆ ಬರುವಾಗ ನೀಡಿದ್ದ ಭರವಸೆ ಈಡೇರಿಸದೆ ಇರುವುದಾಗಲಿ, ವಿಪಕ್ಷಗಳೆಲ್ಲಾ ಸೇರಿ ಮೈತ್ರಿಕೂಟ ರಚನೆಗೆ ಮುಂದಾಗಿರುವುದಾಗಲಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮೋದಿ ಸರ್ಕಾರಕ್ಕೆ ಹಿನ್ನೆಡೆಯಾಗುವ ಸಾಧ್ಯತೆ ಇದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಬಸ್ ಕಣಿವೆಗೆ ಬಿದ್ದು 7 ಸಾವು

ಶಿಮ್ಲಾ, ಜೂ. 1: ಹಿಮಾಚಲ ಪ್ರದೇಶದ ರಸ್ತೆ ಸಾರಿಗೆ ಸಂಸ್ಥೆ ಬಸ್ ಕಣಿವೆಗೆ ಉರುಳಿ ಬಿದ್ದ ಪರಿಣಾಮ 7 ಮಂದಿ ಸಾವನ್ನಪ್ಪಿರುವ ಘಟನೆ ಚೈಲಾ ಎಂಬಲ್ಲಿ ನಡೆದಿದೆ. ಟಿಕ್ಕಾರ್ ಎಂಬಲ್ಲಿಂದ ಶಿಮ್ಲಾಗೆ ಬರುತ್ತಿದ್ದ ಬಸ್ ಚೈಲಾ ಬಳಿ ಕಣಿವೆಗೆ ಉರುಳಿ 7 ಮಂದಿ ಸಾವಿಗೀಡಾಗಿದ್ದು, 26 ಮಂದಿಗೆ ಗಾಯಗಳಾಗಿವೆ. ಬಸ್‍ನಲ್ಲಿ 33 ಪ್ರಯಾಣಿಕರಿದ್ದರು. ಅಪಘಾತದ ವೇಳೆ ಇಬ್ಬರು ಮಹಿಳೆಯರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಶುಕ್ರವಾರ ಬೆಳಿಗ್ಗೆ ಅಪಘಾತ ಸಂಭವಿಸಿದ್ದು ಇದನ್ನು ನೋಡಿದ ಕಾರು ಚಾಲಕರೊಬ್ಬರು ತೋಘ್ ಪೆÇಲೀಸ್ ಠಾಣೆಗೆ ವಿಷಯ ತಲುಪಿಸಿದ್ದಾರೆ. ಶಿಮ್ಲಾದಿಂದ 42 ಕಿ.ಮೀ. ದೂರದಲ್ಲಿರುವ ತೋಘ್-ಹಟ್ಕೊಟಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದೆ. ಗಾಯಾಳುಗಳನ್ನು ತೋಘ್ ಸಿವಿಲ್ ಆಸ್ಪತ್ರೆಗೆ ದಾಖಲಿಸಿದ್ದು, ಗಂಭೀರ ಗಾಯಗೊಂಡವರನ್ನು ಇಂದಿರಾ ಗಾಂಧಿ ಮೆಡಿಕಲ್ ಕಾಲೇಜ್ ಹಾಸ್ಪಿಟಲ್‍ಗೆ ದಾಖಲಿಸಲಾಗಿದೆ.

ನ್ಯಾಯಮೂರ್ತಿಗಳ ನೇಮಕ

ಬೆಂಗಳೂರು, ಜೂ. 1: ರಾಜ್ಯ ಹೈಕೋರ್ಟ್ ಕಾನೂನು ಸಚಿವಾಲಯ ಇಬ್ಬರು ನ್ಯಾಯಮೂರ್ತಿಗಳನ್ನು ನೇಮಕ ಮಾಡಿ ಆದೇಶಿಸಿದೆ. ಹಿರಿತನದ ಆಧಾರದಲ್ಲಿ ಮಹಮ್ಮದ್ ನವಾಜ್ ಹಾಗೂ ಹಾರೆಕೊಪ್ಪ ತಿಮ್ಮಣ್ಣಗೌಡ ನರೇಂದ್ರ ಪ್ರಸಾದ್ ಅವರುಗಳನ್ನು ಎರಡು ವರ್ಷದ ಅವಧಿಗೆ ನೇಮಕ ಮಾಡಲಾಗಿದೆ.