ಗೋಣಿಕೊಪ್ಪ ವರದಿ, ಮೇ 31: ರೈತರೊಂದಿಗೆ ಚರ್ಚಿಸಲು ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದಲ್ಲಿ ಬೆಂಗಳೂರಿನ ವಿಧಾನಸೌಧದಲ್ಲಿ ಕರೆದಿದ್ದ ರೈತ ಮುಖಂಡರುಗಳ ಸಭೆಗೆ ಕೊಡಗಿನ ರೈತ ಸಂಘದ ಪದಾಧಿಕಾರಿಗಳು ಪಾಲ್ಗೊಂಡರು.

ಕೊಡಗು ರೈತ ಸಂಘ ಅಧ್ಯಕ್ಷ ಮನು ಸೋಮಯ್ಯ, ಪ್ರಧಾನ ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ, ಪ್ರಮುಖರುಗಳಾದ ಸಂತೋಷ್ ಪೂವಯ್ಯ, ಪ್ರವೀಣ್ ಬೋಪಯ್ಯ, ಸೋಮಪ್ಪ ಹಾಗೂ ಸಂಕ್ರಪ್ಪ ಪಾಲ್ಗೊಂಡರು.