ಮಡಿಕೇರಿ, ಮೇ 31: ಜವಾಹರ ನವೋದಯ ವಿದ್ಯಾಲಯ ಗಾಳಿಬೀಡುವಿನ ಹತ್ತನೇ ಮತ್ತು ಹನ್ನೆರಡನೇ ತರಗತಿಯ ಸಿ.ಬಿ.ಎಸ್.ಇ. ಪಠ್ಯ ಕ್ರಮದ 2017-18ನೇ ಶೈಕ್ಷಣಿಕ ವರ್ಷದ ಫಲಿತಾಂಶಗಳು ಪ್ರಕಟಗೊಂಡಿದ್ದು ಶೇ 100 ಫಲಿತಾಂಶ ಬಂದಿದೆ.
ಹನ್ನೆರಡನೇ ತರಗತಿ ‘ವಿಜ್ಞಾನ’ ವಿಭಾಗದಲ್ಲಿ ಪರೀಕ್ಷೆಗೆ ಹಾಜರಾದ 39 ವಿದ್ಯಾರ್ಥಿಗಳಲ್ಲಿ 32 ವಿದ್ಯಾರ್ಥಿಗಳು ಉನ್ನತ ಶ್ರೇಣಿಯೊಂದಿಗೆ, 7 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಗಳೊಂದಿಗೆ ತೇರ್ಗಡೆಗೊಂಡಿದ್ದು, ತಸ್ವಿನ್ ಅಯ್ಯಪ್ಪ ಶೇ. 95.6 ಅಂಕಗಳೊಂದಿಗೆ ಪ್ರಥಮ ಸ್ಥಾನವನ್ನು, ಪಿ.ಕೆ. ಮೋಹನ್ ಶೇ. 91.2 ಅಂಕಗಳೊಂದಿಗೆ ದ್ವಿತೀಯ ಸ್ಥಾನವನ್ನು, ತಾಜ್ ತಂಗಮ್ಮ ಶೇ. 90.8 ಅಂಕಗಳೊಂದಿಗೆ ತೃತೀಯ ಸ್ಥಾನ ಪಡೆದಿದ್ದಾರೆ.
ಹನ್ನೆರಡನೇ ತರಗತಿ ‘ವೃತ್ತಿಪರ ಶಿಕ್ಷಣ’ ವಿಭಾಗದಲ್ಲಿ ಪರೀಕ್ಷೆಗೆ ಹಾಜರಾದ 14 ವಿದ್ಯಾರ್ಥಿಗಳಲ್ಲಿ 11 ವಿದ್ಯಾರ್ಥಿಗಳು ಉನ್ನತ ಶ್ರೇಣಿಯೊಂದಿಗೆ, ಓರ್ವ ವಿದ್ಯಾರ್ಥಿ ಪ್ರಥಮ ಶ್ರೇಣಿಯೊಂದಿಗೆ, 2 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯೊಂದಿಗೆ ತೇರ್ಗಡೆಗೊಂಡಿದ್ದು, ಪೃಥ್ವಿ ಡಿ.ಎಂ. ಶೇ. 89.4 ಅಂಕಗಳೊಂದಿಗೆ ಪ್ರಥಮ ಸ್ಥಾನವನ್ನು, ಎಸ್.ಎಲ್. ಚೇತನ್ ಶೇ. 86 ಅಂಕಗಳೊಂದಿಗೆ ದ್ವಿತೀಯ ಸ್ಥಾನವನ್ನು, ಹರ್ಷಿತಾ ಎನ್.ಎಂ. ಶೇ. 85 ಅಂಕಗಳೊಂದಿಗೆ ತೃತೀಯ ಸ್ಥಾನ ಪಡೆದಿರುತ್ತಾರೆ.
ಹತ್ತನೇ ತರಗತಿ ಪರೀಕ್ಷೆಗೆ ಹಾಜರಾದ 78 ವಿದ್ಯಾರ್ಥಿಗಳಲ್ಲಿ 57 ವಿದ್ಯಾರ್ಥಿಗಳು ಉನ್ನತ ಶ್ರೇಣಿಯೊಂದಿಗೆ, 14 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಗಳೊಂದಿಗೆ, 7 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಗಳೊಂದಿಗೆ ತೇರ್ಗಡೆಗೊಂಡಿದ್ದು ಮೊಹಮ್ಮದ್ ಝೀಯಾನ್ ಶೇ. 95.6 ಅಂಕಗಳೊಂದಿಗೆ ಪ್ರಥಮ ಸ್ಥಾನ, ಬಿ.ಎಸ್. ಹಿತಾಶ್ರೀ ಶೇ. 94.8 ಅಂಕಗಳೊಂದಿಗೆ ದ್ವಿತೀಯ ಸ್ಥಾನವನ್ನು, ಹೆಚ್.ಡಿ. ಶ್ರೇಯಾ ಶೇ. 94 ಅಂಕಗಳೊಂದಿಗೆ ತೃತೀಯ ಸ್ಥಾನವನ್ನು ಪಡೆದಿದ್ದಾರೆ ಎಂದು ಜವಾಹರ ನವೋದಯ ವಿದ್ಯಾಲಯದ ಪ್ರಾಂಶುಪಾಲ ಐಸಾಕ್ ತಿಳಿಸಿದ್ದಾರೆ.