ಸೋಮವಾರಪೇಟೆ, ಮೇ 30: ಕರ್ಪಚಕ್ಕೆಯನ್ನು ಅಕ್ರಮವಾಗಿ ಕಡಿದು ಸಾಗಾಟಗೊಳಿಸುತ್ತಿದ್ದ ಮೂವರು ಆರೋಪಿಗಳನ್ನು ಸೋಮವಾರಪೇಟೆ ಅರಣ್ಯ ಇಲಾಖಾಧಿಕಾರಿಗಳು ಬಂಧಿಸಿದ್ದು, ಬಂದಿತರಿಂದ ಕೃತ್ಯಕ್ಕೆ ಬಳಸಿದ ವಾಹನ ಸಹಿತ ರೂ. 1 ಲಕ್ಷ ಮೌಲ್ಯದ ಕರ್ಪ ಚಕ್ಕೆಯನ್ನು ವಶಕ್ಕೆ ಪಡೆಯಲಾಗಿದೆ.

ಸಮೀಪದ ಶಾಂತಳ್ಳಿ ವ್ಯಾಪ್ತಿಯಿಂದ ಕರ್ಪ ಚಕ್ಕೆಯನ್ನು ಸಂಗ್ರಹಿಸಿ ಅಕ್ರಮವಾಗಿ ಟೆಂಪೋ ಟ್ರಾವೆಲರ್ ವಾಹನ (ಕೆ.ಎ.41 ಎ-0159)ದಲ್ಲಿ ಸಕಲೇಶಪುರಕ್ಕೆ ಸಾಗಿಸಲು ಯತ್ನಿಸುತ್ತಿದ್ದ ಸಂದರ್ಭ ಪಟ್ಟಣದಲ್ಲಿ ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖಾಧಿಕಾರಿಗಳು, ಆರೋಪಿ ಗಳಾದ ಬೆಟ್ಟದಕೊಪ್ಪ ಗ್ರಾಮದ ಬಿ.ಎನ್. ಅರುಣ್, ಸುಪ್ರಿತ್, ದುಂಡಳ್ಳಿ-ಚಿನ್ನಹಳ್ಳಿ ಗ್ರಾಮದ ಎಸ್.ಆರ್. ರವೀಂದ್ರ ಅವರುಗಳನ್ನು ವಶಕ್ಕೆ ಪಡೆದಿದ್ದಾರೆ.

ಬಂದಿತರು ಬಳಸಿದ್ದ ಟೆಂಪೋ ಟ್ರಾವಲರ್ ವಾಹನ ಸಹಿತ, 22 ಚೀಲಗಳಲ್ಲಿ ತುಂಬಿಸಿದ್ದ ರೂ. 1 ಲಕ್ಷ ಮೌಲ್ಯದ ಕರ್ಪ ಚಕ್ಕೆಯನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಗಳ ವಿರುದ್ಧ ಮೊಕದ್ದಮೆ ದಾಖಲಿಸಿ ನ್ಯಾಯಾಲ ಯಕ್ಕೆ ಹಾಜರುಪಡಿಸಿದ ಮೇರೆ ನ್ಯಾಯಾಧೀಶರು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದ್ದಾರೆ.

ಆರ್‍ಎಫ್‍ಓ ಲಕ್ಷ್ಮೀಕಾಂತ್, ಡಿಆರ್‍ಎಫ್‍ಓ ಜಗದೀಶ್, ಅರಣ್ಯ ರಕ್ಷಕ ಶ್ರೀಕಾಂತ್, ಚಾಲಕ ಸಂದೀಪ್ ಸೇರಿದಂತೆ ಸಿಬ್ಬಂದಿಗಳು ಕಾರ್ಯಾ ಚರಣೆಯಲ್ಲಿ ಭಾಗವಹಿಸಿದ್ದರು.