ಮಡಿಕೇರಿ, ಮೇ 28: ಸಿದ್ದಾಪುರದ ಬಿ.ಜಿ.ಎಸ್. ಪಬ್ಲಿಕ್ ಸ್ಕೂಲ್ (ಆಂಗ್ಲ ಮಾಧ್ಯಮ) ಇಲಾಖಾ ಅನುಮತಿ ಪಡೆಯದೆ ಇಲಾಖಾ ನಿಯಮಗಳನ್ನು ಉಲ್ಲಂಘನೆ ಮಾಡಿ, ಶಾಲಾ ಮುಂಭಾಗದಲ್ಲಿ ಬೋರ್ಡ್ ಹಾಗೂ ಬ್ಯಾನರ್‍ಗಳನ್ನು ಅಳವಡಿಸಿ ಅನಧಿಕೃತವಾಗಿ ಶಾಲೆ ಪ್ರಾರಂಭಿಸಿದೆ.

ಈ ಬಗ್ಗೆ ಸಾರ್ವಜನಿಕರು ಮತ್ತು ಪೋಷಕರಿಂದ ದೂರುಗಳು ಬಂದಿರುವದರ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ವರದಿ ಹಿನ್ನಲೆ 2018-19ನೇ ಸಾಲಿಗೆ ಪೋಷಕರು ಯಾವದೇ ವಿದ್ಯಾರ್ಥಿಗಳನ್ನು ದಾಖಲಿಸಬಾರದು. ದಾಖಲಿಸಿದ್ದಲ್ಲಿ ಪೋಷಕರೇ ಹೊಣೆಗಾರರಾಗಿರುತ್ತಾರೆ. ಇದಕ್ಕೆ ಇಲಾಖೆ ಜವಾಬ್ದಾರಿಯಾಗಿರುವದಿಲ್ಲ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕಿ ಮಂಜುಳಾ ತಿಳಿಸಿದ್ದಾರೆ.