ಮಡಿಕೇರಿ, ಮೇ 28: ಪಕ್ಷ ವಿರೋಧಿ ಚಟುವಟಿಕೆ ಯಲ್ಲಿ ತೊಡಗಿಸಿಕೊಂಡಿದ್ದ ಕೊಡಗಿನ ಕೆಲವು ಜೆಡಿಎಸ್ ಪ್ರಮುಖರು ಇದೀಗ ಸರ್ಕಾರ ರಚನೆ ಯಾದ ತಕ್ಷಣ ಅಧಿಕಾರ ಕ್ಕಾಗಿ ಪಕ್ಷ ನಿಷ್ಠರಂತೆ ಡ್ರಾಮಾ ಮಾಡಲು ಆರಂಭಿಸಿದ್ದಾರೆ ಎಂದು ಜೆಡಿಎಸ್ ಪರಿಶಿಷ್ಟ ಘಟಕದ ರಾಜ್ಯ ಕಾರ್ಯದರ್ಶಿ ಹೆಚ್.ಎನ್. ಯೋಗೇಶ್ ಕುಮಾರ್ ಆರೋಪಿಸಿದ್ದಾರೆ.

ಕೊಡಗಿನ ಎರಡೂ ಕ್ಷೇತ್ರಗಳಲ್ಲಿ ಕಾರ್ಯಕರ್ತರು ಇಬ್ಬರು ಜೆಡಿಎಸ್ ಅಭ್ಯರ್ಥಿಗಳ ಪರ ಹಗಲು ರಾತ್ರಿ ಎನ್ನದೆ ಶ್ರಮವಹಿಸಿದ್ದರೂ ಕೆಲವು ಪದಾಧಿಕಾರಿಗಳು ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡ ಕಾರಣ ಅಭ್ಯರ್ಥಿಗಳಿಗೆ ಸೋಲಾ ಗಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.ಚುನಾವಣೆ ಸಂದರ್ಭ ಪಕ್ಷದ್ರೋಹ ಮಾಡಿದವರು ಇದೀಗ ಹೆಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳುತ್ತಿದ್ದಂತೆಯೇ ಪಕ್ಷದ ಪ್ರಾಮಾಣಿಕ ಕಾರ್ಯಕರ್ತರಂತೆ ವರ್ತಿಸುತ್ತಿದ್ದಾರೆ. ಇವರ ಪ್ರಾಮಾ ಣಿಕತೆ ಸ್ವಾರ್ಥದಿಂದ ಕೂಡಿದ್ದು, ನಿಗಮ, ಮಂಡಳಿ, ನಾಮನಿರ್ದೇಶ ನದ ಅಧಿಕಾರಕ್ಕಾಗಿ ನಡೆಸುತ್ತಿರುವ ಪ್ರಯತ್ನ ಇದಾಗಿದೆ ಎಂದು ಯೋಗೇಶ್ ಕುಮಾರ್ ಆರೋಪಿಸಿ ದ್ದಾರೆ.ಪ್ರಾಮಾಣಿಕ ಕಾರ್ಯಕರ್ತರ ನಾಡಿಮಿಡಿತ ಅರಿತಿರುವ ಜೆಡಿಎಸ್ ಜಿಲ್ಲಾಧ್ಯಕ್ಷರು ಪಕ್ಷ ದ್ರೋಹಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳ ಬೇಕೆಂದು ಒತ್ತಾಯಿಸಿದ್ದಾರೆ.