ಮಡಿಕೇರಿ, ಮೇ 25: ನಿಫಾ ವೈರಸ್ ಜ್ವರ ಹರಡದಂತೆ ನಗರಸಭೆ ವತಿಯಿಂದ ನಗರ ವ್ಯಾಪ್ತಿಯಲ್ಲಿ ಜಾಗೃತಿ ಮೂಡಿಸಲಾಗಿದೆ. ಇತ್ತೀಚೆಗೆ ಜಿಲ್ಲಾಧಿಕಾರಿ ಶ್ರೀವಿದ್ಯಾ ಅವರು ಅಧಿಕಾರಿಗಳ ಸಭೆ ನಡೆಸಿ ನಿಫಾ ವೈರಸ್ ಜ್ವರ ಹರಡದಂತೆ ಮುಂಜಾಗೃತಾ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದ ಹಿನ್ನೆಲೆ ನಗರಸಭಾ ಆಯುಕ್ತೆ ಶುಭಾ ಅವರ ನೇತೃತ್ವದಲ್ಲಿ ನಗರದಲ್ಲಿ ಹೊಟೇಲ್, ಹಣ್ಣಿನ ಅಂಗಡಿ, ಮಾಂಸದ ಅಂಗಡಿಗಳಿಗೆ ಭೇಟಿಕೊಟ್ಟು ಶುಚಿತ್ವ ಕಾಪಾಡಿಕೊಳ್ಳುವಂತೆ ಸೂಚನೆ ನೀಡಲಾಗಿದೆ.

ಹಣ್ಣುಗಳಿಂದ ನಿಫಾ ವೈರಸ್ ಹರಡುತ್ತದೆ ಎಂಬ ಹಿನ್ನೆಲೆ ಜ್ವರದ ಬಗ್ಗೆ ಅರಿವಿದ್ದಾಗ್ಯೂ ನಗರಸಭೆಯ ಸೂಚನೆ ಮೀರಿ ಎಲ್ಲೆಲ್ಲೂ ಸಿಗುವ ಹಣ್ಣುಗಳನ್ನು ತಂದು ಮಾರಿ ಸಮಸ್ಯೆ ಉಂಟಾದರೆ ಸಂಬಂಧಿಸಿದ ಮಾರಾಟಗಾರರನ್ನು ಹೊಣೆಗಾರರನ್ನಾಗಿ ಮಾಡಲಾಗುವದೆಂದು ನಗರಸಭೆ ಹಲವು ವ್ಯಾಪಾರಿಗಳಿಂದ ಮುಚ್ಚಳಿಕೆ ಬರೆಸಿಕೊಂಡಿದೆ.