*ಗೋಣಿಕೊಪ್ಪಲು, ಮೇ 25 : ಇಲ್ಲಿನ ಕೂರ್ಗ್ ಪಬ್ಲಿಕ್ (ಕಾಪ್ಸ್) ಶಾಲೆಯಲ್ಲಿ ನಡೆಯುತ್ತಿರುವ 19 ಕರ್ನಾಟಕ ಬೆಟಾಲಿಯನ್ ಎನ್‍ಸಿಸಿ ಕ್ಯಾಂಪ್‍ನಲ್ಲಿ ಶುಕ್ರವಾರ ಎನ್‍ಸಿಸಿ ಕೆಡೆಟ್‍ಗಳು ಬಂದೂಕು ಹಿಡಿದು ಗುಂಡು ಹಾರಿಸುವ ತರಬೇತಿ ಪಡೆದರು. ಅಪಾಯ ಒದಗಿದ ಸಂದರ್ಭದಲ್ಲಿ ಶತ್ರುಗಳಿಂದ ತಪ್ಪಿಸಿಕೊಳ್ಳುವ ಬಗೆ, ಶತ್ರುಗಳನ್ನು ಹಿಮ್ಮೆಟ್ಟಿಸುವ ರೀತಿ ಮೊದಲಾದವುಗಳ ಬಗ್ಗೆ ತರಬೇತಿ ನೀಡಲಾಯಿತು.

ಮಡಿಕೇರಿ ಎನ್‍ಸಿಸಿ ಕಮಾಂಡಿಂಗ್ ಅಧಿಕಾರಿ ವಿ.ಎಂ.ನಾಯಕ್, ಕಾಪ್ಸ್ ಶಾಲೆ ಎನ್‍ಸಿಸಿ ಅಧಿಕಾರಿ ಬಿ.ಎಂ.ಗಣೇಶ್, ಕಾವೇರಿ ಕಾಲೇಜು ಎನ್‍ಸಿಸಿ ಅಧಿಕಾರಿ ಬ್ರೈಟಕುಮಾರ್ ತರಬೇತಿ ನೀಡಿದರು. ಶಿಬಿರದಲ್ಲಿ ಜಿಲ್ಲೆಯ ಎನ್‍ಸಿಸಿ ಕೆಡೆಟ್‍ಗಳ ಜತೆಗೆ ಸುಳ್ಯ, ಪುತ್ತೂರಿನ 600 ಕೆಡೆಟ್‍ಗಳು ಪಾಲ್ಗೊಂಡಿದ್ದಾರೆ. ಶಿಬಿರದಲ್ಲಿ ಸಂಜೆ ವೇಳೆ ಕ್ಯಾಂಪ್ ಫೈರಿಂಗ್, ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗುತ್ತಿವೆ.