ಗೋಣಿಕೊಪ್ಪ ವರದಿ, ಮೇ 24: ಇಲ್ಲಿನ ಕಾವೇರಿ ಕಾಲೇಜು ಹಳೆ ವಿದ್ಯಾರ್ಥಿ ಸಂಘದ ವಾರ್ಷಿಕ ಮಹಾಸಭೆ ನಡೆಯಿತು.

ಹಳೆ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಪ್ರೊ. ಟಿ.ಎಂ. ದೇವಯ್ಯ ಮಾತನಾಡಿ, ಈ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿ ಹುದ್ದೆಯಲ್ಲಿ ರುವವರು ಹಾಗೂ ಹಳೆ ವಿದ್ಯಾರ್ಥಿಗಳು ಸಂಘದ ಕಾರ್ಯ ಚಟುವಟಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಕಾಲೇಜಿನ ಏಳಿಗೆಗೆ ತಮ್ಮ ಕೊಡುಗೆ ನೀಡಬೇಕು ಎಂದರು.

ಸಂಘದ ಸಂಚಾಲಕಿ ಎಸ್.ಎಂ. ರಜನಿ ವಾರ್ಷಿಕ ವರದಿ ವಾಚಿಸಿದರು. ಈ ಸಂದರ್ಭ ಕಾವೇರಿ ಕಾಲೇಜು ಪ್ರಾಂಶುಪಾಲರು ಹಾಗೂ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರೊ. ಪಟ್ಟಡ. ಎ. ಪೂವಣ್ಣ ಅವರು ತಾ. 31 ರಂದು ನಿವೃತ್ತಿ ಹೊಂದುತ್ತಿರುವದರಿಂದ ಅವರನ್ನು ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಒಡಿಕತ್ತಿ ನೀಡಿ ಸನ್ಮಾನಿಸುವ ಮೂಲಕ ಬೀಳ್ಕೊಡÀಲಾಯಿತು.

ನಂತರ ಮಾತನಾಡಿದ ಪೂವಣ್ಣ, ಹಳೆ ವಿದ್ಯಾರ್ಥಿಗಳು ಕಾಲೇಜಿನ ಬೇರು ಇದ್ದಂತೆ. ಕಾಲೇಜಿನ ಸರ್ವತೋ ಮುಖ ಅಭಿವೃದ್ಧಿಗೆ ಹಳೇ ವಿದ್ಯಾರ್ಥಿ ಗಳು ತಮ್ಮನ್ನು ತೊಡಗಿಸಿಕೊಂಡು ಮನ್ನಡೆಯಬೇಕು ಎಂದರು. ಈ ಸಂದರ್ಭ ಕಾರ್ಯದರ್ಶಿ ವಾಣಿ ಚಂಗಪ್ಪ, ಖಜಾಂಚಿ ಪಾಲೆಂಗಡ ಮನು ನಂಜಪ್ಪ, ನಿರ್ದೇಶಕರುಗಳಾದ ಕೊಳ್ಳಿಮಾಡ ಅಜಿತ್ ಅಯ್ಯಪ್ಪ, ಕುಪ್ಪಂಡ ಗಣೇಶ್ ತಿಮ್ಮಯ್ಯ, ಪುಚ್ಚಿಮಾಡ ಕಿಶೋರ್ ಬೋಪಯ್ಯ, ಕೊಂಗಂಡ ಜಪ್ಪು ಸುಬ್ಬಯ್ಯ, ಪುಳ್ಳಂಗಡ ನಟೇಶ್, ಕೊಳ್ಳಿಮಾಡ ರಶ್ಮಿ ಅಯ್ಯಪ್ಪ, ಬಲ್ಯಮೀದೇರಿರ ಆಶಾ ಹಾಗೂ ಸದಸ್ಯರು ಹಾಜರಿದ್ದರು.